ಅ.31ರಿಂದ ನ.16ರವರೆಗೆ ಸರ್ದಾರ್ ಪಟೇಲ್ ಜಯಂತಿ ಪ್ರಯುಕ್ತ ವಿವಿಧ ಕಾರ್ಯಕ್ರಮ
ಮಂಗಳೂರು : ಸರ್ದಾರ್ ವಲ್ಲಭಭಾಯಿ ಪಟೇಲ್‌ರ 150ನೇ ಜಯಂತಿಯ ಪ್ರಯುಕ್ತ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಡಿ ಕಾರ್ಯನಿರ್ವಹಿಸುವ ಮೇರಾ ಯುವ ಭಾರತ್ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಭಾರತದ ರಾಜಕೀಯ ಏಕೀಕರಣದ ಮೂಲಕ ಏಕೀಕೃತ ಭಾರತವನ್ನು ನಿರ್ಮಿಸುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್‌ರ ಪಾತ್ರವನ್ನು ಯುವಜನರಿಗೆ ತಿಳಿಯಪಡಿಸುವುದು ಮತ್ತು ದೇಶದ ಐಕ್ಯತೆ ಹಾಗೂ ಸಮಗ್ರತೆಯನ್ನು ಕಾಪಾಡುವಲ್ಲಿ ಯುವಜನರ ಭಾಗವಹಿಸುವಿಕೆಯನ್ನು ಖಚಿತಪಡಿಸುವುದು ಈ ಕಾರ್ಯಕ್ರಮಗಳ ಉದ್ದೇಶವಾಗಿದೆ.
ಅ.31ರಿಂದ ನವೆಂಬರ್ 16ರವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಏಕ ಭಾರತ, ಶ್ರೇಷ್ಠ ಭಾರತ ಎಂಬ ಸಂದೇಶದೊಂದಿಗೆ ಪಾದಯಾತ್ರೆಗಳನ್ನು ಆಯೋಜಿಸಲಾಗುತ್ತದೆ. ಸರ್ದಾರ್ ಪಟೇಲ್ ಅವರ ಚಿಂತನೆಗಳನ್ನು ಯುವ ಮನಸ್ಸುಗಳಿಗೆ ತಲುಪಿಸುವುದು ಈ ಪಾದಯಾತ್ರೆಗಳ ಗುರಿಯಾಗಿದೆ.
ಹೆಚ್ಚಿನ ಮಾಹಿತಿ ಅಥವಾ ಹೆಸರು ನೋಂದಣಿಗೆ https://mybharat.gov.in/pages/unity_march ಎಂಬ ಮೈ ಭಾರತ್ ಪೋರ್ಟಲ್ ವೀಕ್ಷಿಸಬಹುದು ಎಂದು ಮೈ ಭಾರತ್ ಯುವ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.