×
Ad

ದೇರಳಕಟ್ಟೆ ಜಿಲ್ಲಾ ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧ

Update: 2024-08-14 20:15 IST

ಸಾಂದರ್ಭಿಕ ಚಿತ್ರ

ಮಂಗಳೂರು: ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಪಂ ವ್ಯಾಪ್ತಿಯಲ್ಲಿರುವ ಲೋಕೋಪಯೋಗಿ ಇಲಾಖೆಯ ದೇರಳಕಟ್ಟೆ -ಬರುವ ಜಿಲ್ಲಾ ಮುಖ್ಯರಸ್ತೆಯಲ್ಲಿ (ಕಾನಕೆರೆ-ರೆಂಜಾಡಿ) ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿರುವುದರಿಂದ ಮುಂದಿನ ಸೂಚನೆಯವರೆಗೆ ಈ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಮತ್ತು ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಆದೇಶಿಸಿದ್ದಾರೆ.

ರೆಂಜಾಡಿ ಕಡೆಯಿಂದ ಕಾನಕರೆ, ದೇರಳಕಟ್ಟೆ ಕಡೆಗೆ ಸಂಚರಿಸುವ ವಾಹನಗಳು ಸಮೀಪದ ಮಸೀದಿ ಮೂಲಕ ಕಾಂಕ್ರೀಟ್ ರಸ್ತೆಯಾಗಿ ದೇರಳಕಟ್ಟೆ ಜಂಕ್ಷನ್ ತಲುಪುವುದು. ದೇರಳಕಟ್ಟೆ ಕಡೆಯಿಂದ ಕಾನಕೆರೆ ಕಡೆಗೆ ಸಂಚರಿಸುವ ವಾಹನಗಳು ಮಾಣಿ-ಉಳ್ಳಾಲ ರಾಜ್ಯ ಹೆದ್ದಾರಿ-300ರ ದೇರಳಕಟ್ಟೆ ಜಂಕ್ಷನ್‌ನಲ್ಲಿರುವ ಮೀಟಿಂಗ್ ಪಾಯಿಂಟ್ ಹೋಟೆಲ್‌ನ ಎದುರು ಭಾಗದ ರಸ್ತೆಯಲ್ಲಿ ಕಾನಕೆರೆ ಕಡೆಗೆ ಸಂಚರಿಸಲು ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News