×
Ad

ವೇಣೂರು| ಪಡ್ಡoದಡ್ಕ ನೂರುಲ್ ಹುದಾ ಜುಮಾ ಮಸೀದಿಯಲ್ಲಿ ಮೂಲಭೂತ ಸೌಕರ್ಯಗಳ ಲೋಕಾರ್ಪಣೆ

Update: 2025-09-15 19:52 IST

ವೇಣೂರು: ಪಡ್ಡoದಡ್ಕದ ಕೆಂದ್ರ ಮಸೀದಿಯಲ್ಲಿ ವಿವಿಧ ಮೂಲಭೂತ ಸೌಲತ್ತುಗಳನ್ನು ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ ಅಧ್ಯಕ್ಷತೆ ಸೆ.12ರಂದು ಲೋಕಾರ್ಪಣೆ ಮಾಡಲಾಯಿತು.

ಸುಸಜ್ಜಿತವಾದ ನವೀಕೃತ ಹೌಲ್ (ವಝು ಖಾನ)ನ್ನು ತ್ವಯಿಬಾ ಎಜುಕೇಷನಲ್ ಸೆಂಟರ್ (ಪಟ್ಟಾಡಿ) ಮೂಡುಬಿದಿರೆ ಚೆಯರ್‌ಮ್ಯಾನ್  ಸೈಯದ್ ಅಬ್ದುಲ್ ರಹಿಮಾನ್ ಸಾದಾತ್ ತಂಙಳ್ ಬಾಲವಿ ನೆರವೇರಿಸಿದರು. ನವೀಕೃತ ಮದರಸವನ್ನು ಪ್ರಿನ್ಸಿಪಾಲ್ ದಾರುಸ್ಸಲಾಮ್ ದಾವ ಕಾಲೇಜು ಬೆಳ್ತಂಗಡಿಯ ತ್ವಾಹ ತಂಙಳ್ ನೆರವೇರಿಸಿದರು. ಮಸೀದಿ ಕಚೇರಿಯನ್ನು ಮುಂಬೈನ (ಎಂಪೈರ್ ವಿಸ್ತ ಇನ್ಫ್ರಾ) ಉದ್ಯಮಿ ಮೊಹಮ್ಮದ್ ಮುಸ್ತಫಾ ನೆರವೇರಿಸಿದರು. ಮಸೀದಿಯ ಖತೀಬ್ ಕಲಂದರ್ ಶಾಫಿ ಬಾಖವಿ ಖಾಮಿಲ್ ಅಲ್ ಮನ್ನಾನಿ ಕರಾಯ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅಥಿತಿಗಳಾಗಿ ಉದ್ಯಮಿ ಹಾಗು ಡಿಡಿ ಸಮೂಹ ಸಂಸ್ಥೆಗಳ ಚೆಯರ್‌ಮ್ಯಾನ್ ಅಬ್ದುಲ್ ರಝಾಖ್ ಕನ್ನಡಿಕಟ್ಟೆ, ಮಸೀದಿಯ ಮಾಜಿ ಅಧ್ಯಕ್ಷ ಹಾಗು ಉದ್ಯಮಿ ಯುಕೆ ಮೊಹಮ್ಮದ್ ಹಾಜಿ, ಮೂಡುಬಿದಿರೆ ಅಲ್ ಮಫಾಝ ಕಾಲೇಜಿನ ಪ್ರಿನ್ಸಿಪಾಲ್ ಪಿಪಿ ಅಹ್ಮದ್ ಸಖಾಫಿ , ಬೆಳ್ತಂಗಡಿ ಕೇಂದ್ರ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಪತ್ರಕರ್ತ ಎಚ್ ಮಹಮ್ಮದ್ ವೇಣೂರು ಶುಭ ಹಾರೈಸಿದರು.

ಪ್ರಮುಖರಾದ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಕಟ್ಟೆ, ಕೋಶಾಧಿಕಾರಿ ಪಿಜೆ ಮಹಮೂದ್, ಲೆಕ್ಕ ಪರಿಶೋಧಕ ಇದ್ರೀಸ್ ಪುಲಾಬೆ, ಜೊತೆ ಕಾರ್ಯದರ್ಶಿ ಅಬ್ದು ಸಲಾಂ ಕೇಶವ ನಗರ, ಸದಸ್ಯರಾದ ಅಶ್ರಫ್ ಗಾಂಧಿ ನಗರ, ಅಶ್ರಫ್ ಕಿರೋಡಿ, ಯುಕೆ ಇರ್ಫಾನ್ ಪೆರಿಂಜೆ, ಶಾಂತಿ ನಗರ ಮದರಸ ಅಧ್ಯಕ್ಷ ಅಶ್ರಫ್ ಉಪಸ್ಥಿತರಿದ್ದರು.

ಪ್ರಮುಖ ದಾನಿಗಳಾದ ಸಾರ ಇಬ್ರಾಹಿಂ ಟ್ರಸ್ಟ್ ನ ಪರವಾಗಿ ಅಕ್ಬರ್ ಪೆರಿಂಜೆ, ಯುಕೆ ಮೊಹಮ್ಮದ್ ಹಾಜಿ ಹಾಗು ಮೊಹಮ್ಮದ್ ಮುಸ್ತಫಾ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಮೊಹಮ್ಮದ್ ಶಾಫಿ ಸ್ವಾಗತಿಸಿದರು, ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ರಫೀಕ್ ಪಡ್ಡ ವಂದಿಸಿದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News