×
Ad

ಜೆರೋಸಾ ಶಾಲಾ ಶಿಕ್ಷಕಿಯ ಬಗ್ಗೆ ಮಾಧ್ಯಮ ಹೇಳಿಕೆ ನೀಡಿದ ಮಹಿಳೆಗೆ ಬೆದರಿಕೆ ಕರೆ ಆರೋಪ; ದೂರು ದಾಖಲು

Update: 2024-02-20 16:05 IST

ಮಂಗಳೂರು, ಫೆ.20: ಸಂತ ಜೆರೋಸಾ ಶಾಲೆಯ ಘಟನೆಗೆ ಸಂಬಂಧಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ವಿದ್ಯಾರ್ಥಿಯ ಪೋಷಕಿಯೊಬ್ಬರಿಗೆ ವಿದೇಶದಿಂದ ಜೀವ ಬೆದರಿಕೆ ಕರೆ ಬಂದಿದೆ ಎನ್ನಲಾಗಿದ್ದು,ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿದೆ.

ವಿದೇಶದಿಂದ ರಾತ್ರಿ ವೇಳೆ ಮೊಬೈಲ್ ಫೋನ್ ಗೆ ನಿರಂತರ ಅನಾಮಿಕ ಕರೆಗಳು ಬರುತ್ತಿದ್ದು, ಬೆದರಿಕೆ ಹಾಕುತ್ತಿದ್ದಾರೆ. ಮಾತ್ರವಲ್ಲ ವಾಟ್ಸ್ ಆ್ಯಪ್ ಗೆ ಅವಾಚ್ಯ ಮೆಸೇಜ್ ಗಳು ಬರುತ್ತಿವೆ ಎಂದು ಕವಿತಾ ಎಂಬವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಜೆಪ್ಪಿಮೊಗರು ನಿವಾಸಿಯಾಗಿರುವ ಕವಿತಾರ ಪುತ್ರಿ ಸಂತ ಜೆರೋಸಾ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ.

ಹಿಂದೂ ಧರ್ಮ ಬಗ್ಗೆ ಅವಹೇಳನ ಮಾಡಿದ್ದಾರೆಂಬ ಆರೋಪ ಹೊತ್ತಿರುವ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಬಗ್ಗೆ ವಿದ್ಯಾರ್ಥಿನಿ ಮನೆಯಲ್ಲಿ ಹೇಳಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಫೆ.10ರಂದು ಹಿಂದುತ್ವ ಸಂಘಟನೆಗಳ ಜೊತೆಗೆ ಶಾಲಾ ಕಚೇರಿಗೆ ಬಂದಿದ್ದ ಕವಿತಾ, ಆರೋಪಿ ಶಿಕ್ಷಕಿ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯ ಮಾಡಿದ್ದರು. ಈ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News