×
Ad

ನ.14- 15ರಂದು ಯೆನ್‌ಕ್ವಿಝ್ 2025: ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆ

Update: 2025-11-06 15:10 IST

ಮಂಗಳೂರು, ನ.6: ಯೆನೆಪೋಯ ಸ್ಕೂಲ್ ವತಿಯಿಂದ ಮಂಗಳೂರು ಕ್ವಿಝಿಂಗ್ ಫೌಂಡೇಶನ್ ಸಹಯೋಗದಲ್ಲಿ ನ. 14 ಮತ್ತು 15ರಂದು ಯೆನ್ ಕ್ವಿಝ್ 2025 ಪ್ರೀಮಿಯರ್ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸುದ್ದಿಗೋಷ್ಟಿಯಲ್ಲಿ ಗುರುವಾರ ಮಾಹಿತಿ ನೀಡಿದ ಯೆನೆಪೋಯ ಶಾಲೆಯ ಪ್ರಾಂಶುಪಾಲ ಆ್ಯಂಟನಿ ಜೋಸೆಫ್, ಜಪ್ಪಿನಮೊಗರಿನ ಶಾಲಾ ಆವರಣದಲ್ಲಿ ಈ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ ಎಂದರು.

ವಿದ್ಯಾರ್ಥಿಗಳಲ್ಲಿ ಕೌತುಕ ಹುಟ್ಟುಹಾಕಲು, ಶೈಕ್ಷಣಿಕ ತಜ್ಞತೆ ಪೋಷಿಸಲು ಹಾಗೂ ಆರೋಗ್ಯಕರ ಸ್ಪರ್ಧಾ ಮನೋಭಾವ ರೂಢಿಸಲು ವಿನ್ಯಾಸಗೊಳಿಸಲಾದ ಕ್ರಿಯಾತ್ಮಕ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆ ಇದಾಗಿದೆ. ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, 5ರಿಂದ 8ನೆ ತರಗತಿವರೆಗೆ ನ. 14ರಂದು ಹಾಗೂ 9ರಿಂದ 12ನೆ ತರಗತಿವರೆಗೆ ನ. 15ರಂದು ಸಂಜೆ 4.30ರಿಂದ ಸ್ಪರ್ದೆಗಳು ನಡೆಯಲಿವೆ. ಲಿಖಿತ ಪೂರ್ವಭಾವಿ ಸುತ್ತು, ಅಗ್ರ ಆರು ಅರ್ಹತಾ ತಂಡಗಳಿಗೆ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ. ಪ್ರತಿ ತಂಡ ಇಬ್ಬರು ಸದಸ್ಯರನ್ನು ಒಳಗೊಂಡಿರಬಹುದು. ತಂಡದ ಸದಸ್ಯರು ಒಂದೇ ಶಾಲೆಗೆ ಸೇರಿರಬೇಕು ಎಂಬ ನಿರ್ಬಂಧವಿಲ್ಲ. ಒಟ್ಟು 60000 ರೂ.ವವರೆಗೆ ನಗದು ಬಹುಮಾನವಿದೆ. ಮಂಗಳೂರು ಮತ್ತು ಉಡುಪಿಯ ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಆಸಕ್ತ ವಿದ್ಯಾರ್ಥಿಗಳು ನೋಂದಣಿ ಲಿಂಕ್ ಮೂಲಕ ನ. 10ರೊಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ಅವರು ವಿವರಿಸಿದರು.

ಗೋಷ್ಟಿಯಲ್ಲಿ ಮಂಗಳೂರು ಕ್ವಿಜಿಂಗ್ ಫೌಂಡೇಶನ್‌ನ ಅಧ್ಯಕ್ಷ ಡಾ. ಅಣ್ಣಪ್ಪ ಕಾಮತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News