×
Ad

ಉನ್ನತ ಶಿಕ್ಷಣದಲ್ಲಿ ಉತ್ತರ ಪ್ರದೇಶದ ಉತ್ತಮ ಪ್ರಗತಿ: ಆನಂದಿ ಬೆನ್ ಪಟೇಲ್

ಕರ್ನಾಟಕ - ತ್ರಿಪುರಾ ರಾಜ್ಯದ ಪತ್ರಕರ್ತರ ನಿಯೋಗ‌ ಯುಪಿ ರಾಜ್ಯಪಾಲರ ಭೇಟಿ

Update: 2026-03-07 18:35 IST

​ಲಕ್ನೋ: ಉತ್ತರ ಪ್ರದೇಶ ರಾಜ್ಯವು ಉನ್ನತ ‌ಶಿಕ್ಚಣದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ‌ ಎಂದು ​ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ತಿಳಿಸಿದ್ದಾರೆ.

ಲಕ್ನೋದ ಜನ್ ಭವನ'ದಲ್ಲಿ ತಮ್ಮನ್ನು ಭೇಟಿಯಾದ ಕರ್ನಾಟಕ ಮತ್ತು ತ್ರಿಪುರ ರಾಜ್ಯದ ಪತ್ರಕರ್ತರೊಂದಿಗೆ ಮಾತನಾಡಿದರು.

ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (PIB) ಆಯೋಜಿರುವ ಉತ್ಯರ ಪ್ರದೇಶ ಅಧ್ಯಯನ‌ ಪ್ರವಾಸ ಕೈಗೊಂಡಿರುವ ಪತ್ರಕರ್ತರೊಂದಿಗೆ ನಡೆಸಿದ‌ ‌ಸಂವಾದ ಕಾರ್ಯಕ್ರಮದಲ್ಲಿ ರಾಜ್ಯಪಾಲರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕೆಜಿಯಿಂದ ಪಿಜಿ ತನಕ ​ಶಿಕ್ಷಣದ ಮೇಲೆ ಒತ್ತು: 'ಶಿಕ್ಚಣ ಕ್ಷೇತ್ರದ ಅಭಿವೃದ್ಧಿಗೆ ಕೆಜಿಯಿಂದ ಪಿಜಿಯವರೆಗೆ' (KG to PG) ಗಮನ‌ ಹರಿಸಬೇಕಾಗಿದೆ ಎಂದ‌‌ ಅವರು .ಅಂಗನವಾಡಿಯಲ್ಲಿ 3 ವರ್ಷದ ಮಕ್ಕಳಿಗೆ ಮತ್ತು 6 ವರ್ಷದ ಮಕ್ಕಳಿಗೆ ಒಂದನೇ ತರಗತಿಯಲ್ಲಿ ಶೇ. 100 ರಷ್ಟು ದಾಖಲಾತಿಯನ್ನು ದೃಢಪಡಿಸಬೇಕಾಗಿದೆ ಎಂದು ತಿಳಿಸಿದರು.

​ರಾಜ್ಯದ 18 ವಿಶ್ವವಿದ್ಯಾಲಯಗಳು NAAC 'A' ಅಥವಾ ಅದಕ್ಕಿಂತ ಹೆಚ್ಚಿನ ಶ್ರೇಯಾಂಕ ಪಡೆದಿವೆ. ​56 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳನ್ನು ಸಂಪನ್ಮೂಲ ಸಮೃದ್ಧಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

​ಹೆಣ್ಣು ಮಕ್ಕಳ ಸಬಲೀಕರಣ: ಗುಜರಾತ್‌ನಲ್ಲಿ ದೀರ್ಘ ಕಾಲ ಸಚಿವರಾಗಿ‌ ಆನಂತರ ಮುಖ್ಯಮಂತ್ರಿ ಅಗಿ ಪಡೆದ ಅನುಭವವನ್ನು ವಿವರಿಸಿದರು. ಮಹಿಳಾ ಸಬಲೀಕರಣಕ್ಕೆ ಸರಕಾರ ಒತ್ತು ನೀಡಬೇಕಾಗಿದೆ ಸಾಕ್ಷರತೆ ಇರುವ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳ ದಾಖಲಾತಿಗಾಗಿ 'ನರ್ಮದಾ ಬಾಂಡ್' ಪ್ರೋತ್ಸಾಹಧನ ಮತ್ತು ಗರ್ಭಿಣಿಯರಿಗೆ 'ಸುಖಡಿ' ಎಂಬ ಪೌಷ್ಟಿಕ ಆಹಾರ ವಿತರಿಸುವ ಯೋಜನೆಗಳ‌ ಮಾಹಿತಿ ನೀಡಿದರು.

ಉನ್ನತ ಶಿಕ್ಷಣದ ಪ್ರಗತಿ: ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳು NAAC, NIRF ಮತ್ತು QS ವಿಶ್ವ ಶ್ರೇಯಾಂಕ ಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿವೆ. ಶಿಕ್ಷಕರ ಪಾರದರ್ಶಕ ನೇಮಕಾತಿ ಮತ್ತು ಕುಲಪತಿಗಳ ನಿಷ್ಪಕ್ಷಪಾತ ಆಯ್ಕೆಯು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿದೆ ಎಂದರು.

​ಆರೋಗ್ಯ ಮತ್ತು ಲಸಿಕೆ: ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ (Cervical Cancer) ತಡೆಗಟ್ಟಲು ಉಚಿತ HPV ಲಸಿಕಾ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು. ಸುಮಾರು 50 ಸಾವಿರ ಹೆಣ್ಣು ಮಕ್ಕಳಿಗೆ ಈಗಾಗಲೇ ಲಸಿಕೆ ನೀಡಲಾಗಿದ್ದು, ಬುಡಕಟ್ಟು ಸಮುದಾಯದ ಹೆಣ್ಣು ಮಕ್ಕಳಿಗಾಗಿ 3 ಲಕ್ಷ ಡೋಸ್ ಲಸಿಕೆಗಳನ್ನು ಒದಗಿಸ ಲಾಗುತ್ತಿದೆ ಎಂದು ಮಾಹಿತಿ ಒದಗಿಸಿದರು.

​ಐದು ಗ್ರಾಮಗಳ ದತ್ತು: ಪ್ರತಿಯೊಂದು ವಿಶ್ವವಿದ್ಯಾಲಯವು ಕನಿಷ್ಠ 5 ಗ್ರಾಮಗಳನ್ನು ದತ್ತು ಪಡೆದು ಅಲ್ಲಿ ಸ್ವಚ್ಛತೆ, ತೋಟಗಾರಿಕೆ ಮತ್ತು ಸರಕಾರಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

​"ಮಹಿಳೆಯು ಸ್ವಯಂ ಪ್ರೇರಣೆಯ ಸ್ವರೂಪ. ಮಹಿಳೆಯು ಸ್ವಯಂ ಪ್ರೇರಣೆಯ ಸ್ವರೂಪ ಆಗಿದ್ದಾಳೆ. ಆಕೆ ತನ್ನ ಸಾಮರ್ಥ್ಯವನ್ನು ಗುರುತಿಸಿದಾಗ 'ನಾರಾಯಣಿ' ಆಗುತ್ತಾಳೆ. ಮಹಿಳೆಯರಿಗೆ ಉನ್ನತ ಶಿಕ್ಷಣ ಮತ್ತು ಜಾಗೃತಿಯು ಬಾಲ್ಯವಿವಾಹ ಮತ್ತು ವರದಕ್ಷಿಣೆ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳಿಗೆ ಪರಿಣಾಮಕಾರಿ ಪರಿಹಾರವಾಗಿದೆ ಎಂದು ರಾಜ್ಯಪಾಲರು ನುಡಿದರು.

ಶಿಕ್ಷಣ ವಿಭಾಗದ ವಿಶೇಷ ಅಧಿಕಾರಿ ಡಾ. ಪಂಕಜ್ ಎಲ್. ಜಾನಿ , ಪಿಐಬಿಯ ಗುವಾಹಟಿಯ ಎಡಿಜಿಪಿ ಕೃಪಾ ಶಂಕರ್ ಯಾದವ್, ಲಕ್ನೋದ ನಿರ್ದೇಶಕ ದಿಲೀಪ್ ಕುಮಾರ್ ಶುಕ್ಲಾ, ಬೆಂಗಳೂರು ಕೇಂದ್ರದ ಸಹಾಯಕ ನಿರ್ದೇಶಕಿ ಕರಿಶ್ಮಾ ಪಂತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News