×
Ad

ಸುಪ್ರೀಂ ಕೋರ್ಟ್‌ನ 75ನೇ ವಾರ್ಷಿಕೋತ್ಸವ | ಹೊಸ ಧ್ವಜ,ಲಾಂಛನ ಅನಾವರಣ

Update: 2024-09-01 21:27 IST

PC: PTI 

ಹೊಸದಿಲ್ಲಿ : ಸರ್ವೋಚ್ಚ ನ್ಯಾಯಾಲಯದ 75ನೇ ವಾರ್ಷಿಕೋತ್ಸವದ ಅಂಗವಾಗಿ ನೂತನ ಧ್ವಜ ಮತ್ತು ಲಾಂಛನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರವಿವಾರ ಅನಾವರಣಗೊಳಿಸಿದರು.

ನ್ಯಾಯ ಮತ್ತು ಪ್ರಜಾಪ್ರಭುತ್ವವನ್ನು ಪ್ರತಿನಿಧಿಸುವ ಸರ್ವೋಚ್ಚ ನ್ಯಾಯಾಲಯದ ನೂತನ ಧ್ವಜ ಮತ್ತು ಲಾಂಛನವನ್ನು ದಿಲ್ಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯು ರೂಪಿಸಿದೆ.

ಧ್ವಜವು ಅಶೋಕ ಚಕ್ರ,ಸರ್ವೋಚ್ಚ ನ್ಯಾಯಾಲಯದ ಸಾಂಪ್ರದಾಯಿಕ ಕಟ್ಟಡ ಮತ್ತು ಸಂವಿಧಾನವನ್ನು ಒಳಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News