ದೇವಾಲಯಗಳ ಅರ್ಚಕರಿಗೆ 77.85 ಕೋಟಿ ರೂ. ಭತ್ಯೆ ಬಿಡುಗಡೆ; ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಆದೇಶ
Update: 2023-09-03 22:36 IST
ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ದೇವಾಲಯಗಳ ಅರ್ಚಕರಿಗೆ ನೀಡುವ 2023-24ನೆ ಸಾಲಿನ ‘ತಸ್ತೀಕ್ (ಗೌರವ ಧನ) ಭತ್ಯೆ’ಯನ್ನು ಬಿಡುಗಡೆ ಮಾಡಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.
ಬಿಡುಗಡೆ ಮಾಡಲಾಗಿರುವ 77,85,54,497 ರೂ.ಮೊದಲ ಕಂತಿನ ಹಣವನ್ನು ತಾಲೂಕುವಾರು ಹಂಚಿಕೆ ಮಾಡಲಾಗಿದ್ದು, ತಹಶಿಲ್ದಾರ್‍ಗಳು ಯಾವುದೇ ಷರತ್ತುಗಳನ್ನು ಹಾಕದೆ ಆಯಾ ಧಾರ್ಮಿಕ ಸಂಸ್ಥೆಗಳ ಮೂಲಕ ಅರ್ಚಕರ ಖಾತೆಗಳಿಗೆ ನೇರವಾಗಿ ಜಮೆ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.