BS 4 ಮತ್ತು ಮೇಲಿನ ವಾಹನಗಳು ಮಾತ್ರ ದಿಲ್ಲಿ ರಸ್ತೆ ಪ್ರವೇಶಿಸಬೇಕು: ಸುಪ್ರೀಂ ಕೋರ್ಟ್
Photo Credit : PTI
ಹೊಸದಿಲ್ಲಿ : ಭಾರತ್ ಸ್ಟೇಜ್ (ಬಿಎಸ್) 4 ಇಂಜಿನ್ ಹೊಂದಿರುವ ವಾಹನಗಳಿಗೆ ಮಾತ್ರ ದಿಲ್ಲಿಯ ರಸ್ತೆಗಳಲ್ಲಿ ಡಿಸೆಂಬರ್ 18ರಿಂದ ವಿನಾಯಿತಿ ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಈ ಮೂಲಕ ಅದು, 10 ವರ್ಷ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳನ್ನು ನಿಷೇಧಿಸುವ ತನ್ನ ಹಿಂದಿನ ಆದೇಶಕ್ಕೆ ತಿದ್ದುಪಡಿ ಮಾಡಿದೆ.
ಭಾರತದಲ್ಲಿ, 15 ವರ್ಷ ಹಳೆಯ ಪೆಟ್ರೋಲ್ ಚಾಲಿತ ವಾಹನಗಳು ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳು ಹೆಚ್ಚಾಗಿ ಬಿಎಸ್ 3 ಇಂಜಿನ್‌ಗಳನ್ನು ಹೊಂದಿವೆ.
ಇದಕ್ಕೂ ಮೊದಲು, ದಿಲ್ಲಿ ಸರಕಾರ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, 10 ವರ್ಷ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಆದೇಶಿಸಿತ್ತು. ಇದು ವಾಹನ ಮಾಲೀಕರು ಮತ್ತು ಕಾನೂನು ಅನುಷ್ಠಾನ ಸಂಸ್ಥೆಗಳಲ್ಲಿ ಗೊಂದಲ ಹುಟ್ಟಿಸಿತ್ತು.
ವಾಯು ಗುಣಮಟ್ಟ ನಿರ್ವಹಣೆ ಆಯೋಗ (ಸಿಎಕ್ಯೂಎಮ್)ದ ಮನವಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು ಬುಧವಾರ ಈ ಸ್ಪಷ್ಟೀಕರಣ ನೀಡಿದೆ.