×
Ad

ಟೇಕಾಫ್‌ ರನ್ ವೇಯಲ್ಲಿ ಲ್ಯಾಂಡ್ ಆದ ಅಫ್ಘಾನ್ ಏರ್‌ಲೈನ್ಸ್‌ ವಿಮಾನ : ದಿಲ್ಲಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ!

Update: 2025-11-24 18:47 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಕಾಬೂಲ್‌ನಿಂದ ಬಂದ ಅರಿಯಾನಾ ಅಫ್ಘಾನ್ ಏರ್‌ಲೈನ್ಸ್‌ ವಿಮಾನ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಂದು ವಿಮಾನ ಟೇಕಫ್‌ಗೆ  ಬಳಸುತ್ತಿದ್ದ ರನ್‌ವೇಯಲ್ಲಿ ತಪ್ಪಾಗಿ ಇಳಿದಿದೆ. ಇದರಿಂದ ಅದೃಷ್ಟವಶಾತ್ ಸಂಭಾವ್ಯ ಭಾರೀ ಅನಾಹುತವೊಂದು ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರವಿವಾರ ನಡೆದ ಈ ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಬೂಲ್‌ನಿಂದ ದಿಲ್ಲಿಗೆ ಹಾರಾಟ ನಡೆಸುತ್ತಿದ್ದ ಅರಿಯಾನಾ ಅಫ್ಘಾನ್ ಏರ್‌ಲೈನ್ಸ್‌  A310 ವಿಮಾನ FG-311 ರನ್‌ವೇ 29L ನಲ್ಲಿ ಇಳಿಯಲು ಅನುಮತಿ ನೀಡಲಾಗಿತ್ತು. ಆದರೆ ವಿಮಾನ ರನ್‌ವೇ 29Rನಲ್ಲಿ ಇಳಿಯಿತು ಎಂದು ಹಿರಿಯ DGCA ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅರಿಯಾನಾ ವಿಮಾನದ ಪೈಲಟ್ ಇನ್ ಕಮಾಂಡ್ ಪ್ರಕಾರ, ವಿಮಾನವು ರನ್‌ವೇಯಿಂದ ಸುಮಾರು 4 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS) ಸಿಗ್ನಲ್ ಅನ್ನು ಕಳೆದುಕೊಂಡಿತು. ಪರಿಣಾಮವಾಗಿ ವಿಮಾನವು ಸ್ವಲ್ಪ ಬಲಕ್ಕೆ ತಿರುಗಿ 29Rನಲ್ಲಿ ಇಳಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News