×
Ad

ಇಂಡಿಯಾ ಗೇಟ್ ಪೋಟೊ ಹಂಚಿಕೊಂಡ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

Update: 2026-02-03 11:00 IST

Photo|economictimes

ವಾಷಿಂಗ್ಟನ್: ದಿಲ್ಲಿಯಲ್ಲಿರುವ ವಿಜಯ ಕಮಾನು ಇಂಡಿಯಾ ಗೇಟ್ ಫೋಟೊ ಹಂಚಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ನಾವು ಇದಕ್ಕಿಂತ ಅದ್ಭುತವಾದ ವಿಜಯ ಕಮಾನನ್ನು ವಾಷಿಂಗ್ಟನ್ ಡಿಸಿಯಲ್ಲಿ ನಿರ್ಮಿಸುತ್ತೇವೆ” ಎಂದು ಘೋಷಿಸಿದ್ದಾರೆ.

ಇಂಡಿಯಾ ಗೇಟ್ ನ ಭಾವಚಿತ್ರವನ್ನು ಟ್ರೂತ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್, “ಭಾರತದ ಸುಂದರವಾದ ವಿಜಯ ಕಮಾನು. ನಮ್ಮದು ಅವರಿಗಿಂತ ಅದ್ಭುತವಾಗಿರಲಿದೆ!” ಎಂದು ಘೋಷಿಸಿದ್ದಾರೆ. ಅಮೆರಿಕ ರಾಜಧಾನಿ ವಾಷಿಂಗ್ಟನ್ ನಲ್ಲಿ ಕಮಾನನ್ನು ನಿರ್ಮಿಸಬೇಕು ಎಂಬ ಪರಿಷ್ಕೃತ ಪ್ರಯತ್ನ ಇದಾಗಿದ್ದು, ಈ ಕಮಾನನ್ನು ಸ್ವಾತಂತ್ರ್ಯ ಕಮಾನು ಎಂದು ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ.

ಅಮೆರಿಕದಲ್ಲಿ ವಿಶ್ವದ ಅತಿ ದೊಡ್ಡ ವಿಜಯ ಕಮಾನನ್ನು ನಿರ್ಮಿಸಬೇಕು ಎಂಬ ತಮ್ಮ ಮಾತನ್ನು ಪುನರುಚ್ಚರಿಸಿರುವ ಡೊನಾಲ್ಡ್ ಟ್ರಂಪ್, ಇದು ದೇಶದ ಹೆಮ್ಮೆಯ ಸಂಕೇತವಾಗಿದೆ ಎಂದು ಹೇಳಿದ್ದಾರೆ.

ಏರ್ ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಸುಮಾರು 200 ವರ್ಷಗಳಿಂದ ಇಂತಹ ಸ್ಮಾರಕವನ್ನು ನಿರ್ಮಿಸಬೇಕು ಎಂಬ ಯೋಜನೆಯಿದೆ. 200 ವರ್ಷಗಳಿಂದ ಕಮಾನೊಂದನ್ನು ನಿರ್ಮಿಸಬೇಕು ಎಂಬ ಬಯಕೆ ಇದೆ. ವಿಶ್ವದ ಕನಿಷ್ಠ 57 ನಗರಗಳಲ್ಲಿ ಈಗಾಗಲೇ ವಿಜಯ ಕಮಾನುಗಳಿವೆ. ಆದರೆ, ಅಂತಹ ಕಮಾನಿಲ್ಲದ ಪ್ರಮುಖ ನಗರವಾಗಿ ವಾಷಿಂಗ್ಟನ್ ಉಳಿದಿದೆ” ಎಂದೂ ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಪ್ರಸ್ತಾವಿತ ಕಮಾನಿನ ನಿರ್ಮಾಣ ಮುಂದಿನ ಕೆಲ ತಿಂಗಳಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಅವರು ಪ್ರಕಟಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News