×
Ad

ಪ್ರಧಾನಿ ಮೋದಿಯ ಪಶ್ಚಿಮ ಬಂಗಾಳ ಭೇಟಿಗೂ ಮುನ್ನ ಕೋಲ್ಕತ್ತಾ ಮೆಟ್ರೊ ಯೋಜನೆಯ ಶ್ರೇಯ ತನ್ನದೆಂದ ಮಮತಾ ಬ್ಯಾನರ್ಜಿ

Update: 2025-08-22 18:44 IST

ಮಮತಾ ಬ್ಯಾನರ್ಜಿ | PTI

ಕೋಲ್ಕತ್ತಾ: ಶುಕ್ರವಾರ ಸಂಜೆ ಮೂರು ಮೆಟ್ರೊ ಮಾರ್ಗಗಳನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಕೋಲ್ಕತ್ತಾಗೆ ನೀಡುತ್ತಿರುವ ಭೇಟಿ ಕಾರ್ಯಕ್ರಮಕ್ಕೆ ಗೈರಾಗಲು ನಿರ್ಧರಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈ ಯೋಜನೆಗೆ ನಾನು ರೈಲ್ವೆ ಸಚಿವೆಯಾಗಿದ್ದಾಗ ಯೋಜನೆ ರೂಪಿಸಲಾಗಿತ್ತು ಹಾಗೂ ಮಂಜೂರು ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಶುಕ್ರವಾರ ಸಂಜೆ ಮೂರು ಪ್ರಮುಖ ಮೆಟ್ರೊ ರೈಲ್ವೆ ಮಾರ್ಗಗಳು ಸೇರಿದಂತೆ 5,200 ಕೋಟಿ ರೂ. ಮೊತ್ತದ ಮೂಲಭೂತ ಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲು ಪಶ್ಚಿೆಮ ಬಂಗಾಳಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ನಂತರ, ಸಾರ್ವಜನಿಕ ಸಮಾವೇಶವೊಂದರಲ್ಲೂ ಪಾಲ್ಗೊಳ್ಳಲಿದ್ದಾರೆ.

ಬಿಜೆಪಿ ಆಡಳಿತಾರೂಢ ರಾಜ್ಯಗಳಲ್ಲಿ ಬಂಗಾಳಿ ಭಾಷಿಕ ವಲಸಿಗರಿಗೆ ನೀಡುತ್ತಿರುವ ಕಿರುಕುಳವನ್ನು ಪ್ರತಿಭಟಿಸಿ ಈ ಕಾರ್ಯಕ್ರಮಗಳಿಗೆ ಗೈರಾಗಲು ಮಮತಾ ಬ್ಯಾನರ್ಜಿ ತೀರ್ಮಾನಿಸಿದ್ದಾರೆಂದು ಟಿಎಂಸಿ ನಾಯಕರು ಪ್ರತಿಪಾದಿಸಿದ್ದಾರೆ.

ಇದಲ್ಲದೆ, 1999ರಿಂದ 2001ರವರೆಗೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರದಲ್ಲಿ ಹಾಗೂ 2009ರಿಂದ 2011ರ ನಡುವೆ ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರಕಾರದ ಅವಧಿಯಲ್ಲಿ ರೈಲ್ವೆ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದ ಮಮತಾ ಬ್ಯಾನರ್ಜಿ, ನಾನು ಎರಡನೆ ಅವಧಿಯಲ್ಲಿ ರೈಲ್ವೆ ಸಚಿವೆಯಾಗಿದ್ದಾಗ, ಕೋಲ್ಕತ್ತದಾದ್ಯಂತ ಈ ಯೋಜನೆಗಳನ್ನು ವಿಸ್ತರಿಸಲು ಸರಣಿ ಮಂಜೂರಾತಿಗಳನ್ನು ನೀಡಲಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಆ ಮೂಲಕ ಮೆಟ್ರೊ ಯೋಜನೆಯ ಶ್ರೇಯವನ್ನು ತಮ್ಮದಾಗಿಸಿಕೊಳ್ಳಲು ಮುಂದಾಗಿದ್ದಾರೆ.

1984ರಲ್ಲಿ ಪ್ರಾರಂಭಗೊಂಡ ಹಸಿರು, ಹಳದಿ ಹಾಗೂ ಕೇಸರಿ ಬಣ್ಣದ ಮೆಟ್ರೊ ಮಾರ್ಗಗಳು ಕೋಲ್ಕತ್ತಾ ನಗರದ ಮೆಟ್ರೊ ಪ್ರಯಾಣದಲ್ಲಿ ಹೊಸ ಭಾಷ್ಯವನ್ನು ಬರೆಯಲಿವೆ. ಕೋಲ್ಕತ್ತಾದ ಇಕ್ಕಟ್ಟಾದ ರಸ್ತೆಗಳಲ್ಲಿನ ದಟ್ಟಣೆಯನ್ನು ಈ ಮೆಟ್ರೊ ಮಾರ್ಗಗಳು ತಗ್ಗಿಸಲಿದ್ದು, ಲಕ್ಷಾಂತರ ಮಂದಿಯ ದೈನಂದಿನ ಪ್ರಯಾಣವನ್ನು ಸುಗಮಗೊಳಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News