×
Ad

ಕಾಂಗ್ರೆಸ್‌ ನ ‘ಮತಗಳ್ಳತನ’ ಆರೋಪದಿಂದ ಅಂತರ ಕಾಯ್ದುಕೊಂಡು ಉಮರ್ ಅಬ್ದುಲ್ಲಾ

Update: 2025-12-16 00:35 IST

photo: indianexpress

ಶ್ರೀನಗರ, ಡಿ. 15: ಕಾಂಗ್ರೆಸ್‌ ನ ‘ಮತಗಳ್ಳತನ’ದ ಆರೋಪದಿಂದ ಅಂತರ ಕಾಯ್ದುಕೊಂಡಿರುವ ಜಮ್ಮು ಹಾಗೂ ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲಾ, ಇದಕ್ಕೂ ಇಂಡಿಯಾ ಬಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸೋಮವಾರ ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿ ನಡೆದ ‘‘ವೋಟ್ ಚೋರ್ ಗದ್ದಿ ಛೋಡ್’’ ರ್ಯಾಲಿಯಲ್ಲಿ ಕಾಂಗ್ರೆಸ್‌ನ ಉನ್ನತ ನಾಯಕರು ಬಿಜೆಪಿ ಹಾಗೂ ಚುನಾವಣಾ ಆಯುಕ್ತರ ವಿರುದ್ಧ ವಾಗ್ದಾಳಿ ಮಾಡಿದ ಒಂದು ದಿನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ಮತಗಳ್ಳತನ ಆಡಳಿತ ಪಕ್ಷದ ಡಿಎನ್‌ಎಯಲ್ಲಿದೆ. ಬಿಜೆಪಿ ನಾಯಕರು ದೇಶದ್ರೋಹಿಗಳು. ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಅವರು ಪಿತೂರಿ ನಡೆಸುತ್ತಿದ್ದಾರೆ. ಅಂತಹ ನಾಯಕರನ್ನು ಅಧಿಕಾರದಿಂದ ತೆಗೆದು ಹಾಕಬೇಕು ಎಂದು ನಾಯಕರು ಆರೋಪಿಸಿದ್ದಾರೆ ಎಂದು ಉಮರ್ ಅಬ್ದುಲಾ ತಿಳಿಸಿದರು.

ಉಮರ್ ಅಬ್ದುಲ್ಲಾ ಅವರ ನ್ಯಾಶನಲ್ ಕಾನ್ಫರೆನ್ಸ್ ಇಂಡಿಯಾ ಬಣದಲ್ಲಿರುವ ಪ್ರಮುಖ ಮಿತ್ರ ಪಕ್ಷವಾಗಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ಸಂಸದರು ಸಂಖ್ಯೆಗೆ ಅನುಗುಣವಾಗಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿದೆ.

ಕಾಂಗ್ರೆಸ್ ಗಮನ ಸೆಳೆದ ‘‘ಮತಗಳ್ಳತನ’’ ಹಾಗೂ ಚುನಾವಣಾ ಅಕ್ರಮದ ಬಗ್ಗೆ ಪ್ರಶ್ನಿಸಿದಾಗ ಅಬ್ದುಲ್ಲಾ ಅವರು, ಇದಕ್ಕೂ ಇಡಿಯಾ ಬಣಕ್ಕೂ ಯಾವುದೇ ಸಂಬಂಧ ಇಲ್ಲ. ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ತನ್ನದೇ ಆದ ಕಾರ್ಯಸೂಚಿಯನ್ನು ರೂಪಿಸುವ ಸ್ವಾತಂತ್ರ್ಯವಿದೆ. ಕಾಂಗ್ರೆಸ್ ಮತಗಳ್ಳತನ ಹಾಗೂ ಎಸ್‌ಐಆರ್ ಅನ್ನು ತನ್ನ ಮುಖ್ಯ ವಿಷಯವನ್ನಾಗಿ ಮಾಡಿಕೊಂಡಿದೆ. ಇದನ್ನು ಮಾಡಬೇಡಿ ಎಂದು ಹೇಳಲು ನಾವು ಯಾರು ಎಂದು ಅವರು ಹೇಳಿದರು.

ಮತಗಳ್ಳತನದ ವಿರುದ್ಧ ಸುಮಾರು 6 ಕೋಟಿ ಸಹಿಗಳನ್ನು ಸಂಗ್ರಹಿಸಲಾಗಿದೆ ಹಾಗೂ ಅದನ್ನು ರಾಷ್ಟ್ರಪತಿಗಳಿಗೆ ನೀಡುವುದಾಗಿ ಕಾಂಗ್ರೆಸ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News