×
Ad

ಅಮೆರಿಕದಿಂದಲೇ ತೈಲ ಖರೀದಿಸಿ: ಭಾರತಕ್ಕೆ ಅಮೆರಿಕದ ರಕ್ಷಣಾ ಇಲಾಖೆಯ ಅಧಿಕಾರಿ ಆಗ್ರಹ

"ಭಾರತಕ್ಕೆ ಇಂಧನ ಪೂರೈಕೆಗೆ ಅಮೆರಿಕಕ್ಕಿಂತ ಉತ್ತಮ ಪರ್ಯಾಯ ಇನ್ನೊಂದಿಲ್ಲ"

Update: 2026-03-05 21:54 IST

ಸಾಂದರ್ಭಿಕ ಚಿತ್ರ | Photo Credit : freepik

ಹೊಸದಿಲ್ಲಿ: ಅಮೆರಿಕದಿಂದ ಇಂಧನವನ್ನು ಖರೀದಿಸುವಂತೆ ಅಮೆರಿಕದ ರಕ್ಷಣಾ ಇಲಾಖೆಯ ಉಪ ಕಾರ್ಯದರ್ಶಿ ಕ್ರಿಸ್ಟೋಫರ್ ಲಾಂಡಾವು ಭಾರತವನ್ನು ಆಗ್ರಹಿಸಿದ್ದು, ಈ ವಿಷಯದಲ್ಲಿ ಅಮೆರಿಕಕ್ಕಿಂತ ಉತ್ತಮ ಪರ್ಯಾಯ ಇನ್ನೊಂದಿಲ್ಲವೆಂದು ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿ ಆಬ್ಸರ್ವರ್ ಸಂಶೋಧನಾ ಪ್ರತಿಷ್ಠಾನ ಆಯೋಜಿಸಿದ ‘ರೈಸಿನಾ ಡೈಲಾಗ್’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ‘‘ಅಧಿಕಾರ, ಉದ್ದೇಶ ಹಾಗೂ ಪಾಲುದಾರಿಕೆಗಳು: ಹೊಸ ಶಕೆಯಲ್ಲಿ ಅಮೆರಿಕದ ವಿದೇಶಾಂಗ ನೀತಿ’’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ರಶ್ಯದಿಂದ ಭಾರತವು ತೈಲ ಖರೀದಿಸುವ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ, ‘‘ನೀವು ಪರ್ಯಾಯ ಮೂಲಗಳೆಡೆಗೆ ನೋಡುವಿರೆಂದು ನಾವು ಆಶಿಸುತ್ತೇವೆ. ಆಗ ಅಮೆರಿಕಕ್ಕಿಂತ ಉತ್ತಮ ಪರ್ಯಾಯ ನಿಮಗೆ ಬೇರೊಂದಿರಲಾರದು’’ ಎಂದು ಹೇಳಿದ್ದಾರೆ.

ಇರಾನ್ ಸಂಘರ್ಷ ತೀವ್ರರೂಪ ಪಡೆದುಕೊಂಡ ಬಳಿಕ ಪ್ರದೇಶದಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವುಂಟಾಗುವ ಸಾಧ್ಯತೆಯ ಬಗ್ಗೆ ಭೀತಿ ಮೂಡಿದೆ. ಇದನ್ನು ನಿವಾರಿಸಲು ರಶ್ಯವು ಭಾರತಕ್ಕೆ ತೈಲ ಪೂರೈಕೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈಗಾಗಲೇ ರಶ್ಯದಿಂದ 9.5 ದಶಲಕ್ಷ ಟನ್ ಬ್ಯಾರೆಲ್ ಕಚ್ಚಾ ತೈಲವು ಭಾರತದ ಸಾಗರಪ್ರದೇಶಗಳ ಸಮೀಪಕ್ಕೆ ಆಗಮಿಸುತ್ತಿದೆ ಎನ್ನಲಾಗಿದೆ.

ಟ್ರಂಪ್ ಆಡಳಿತದ ‘ಅಮೆರಿಕ ಮೊದಲು’ ವಿದೇಶಾಂಗ ನೀತಿಯನ್ನು ಸಮರ್ಥಿಸಿಕೊಂಡರು. ಅಮೆರಿಕ ಫಸ್ಟ್ ಎಂದರೆ , ಅಮೆರಿಕ ಒಂದೇ ಅಲ್ಲ ಮತ್ತು ಏಕಾಂಗಿತನದ ನೀತಿಯೂ ಅಲ್ಲ. ಇತರ ದೇಶಗಳು ಕೂಡಾ ತಮ್ಮ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಬೇಕೆಂದು ಅವರು ಕರೆ ನೀಡಿದರು.

ಅಮೆರಿಕದ ಹಿತಾಸಕ್ತಿಗಳನ್ನು ಬಲಪಡಿಸುವ ಬಗ್ಗೆ ನಮ್ಮ ವಿದೇಶಾಂಗ ನೀತಿಯು ಗಮನವನ್ನು ಕೇಂದ್ರೀಕರಿಸಿ ಎಂದು ಹೇಳಿದ ಲಾಂಡಾವು ಅವರು, ‘‘ ಅಮೆರಿಕವನ್ನು ಮತ್ತೊಮ್ಮೆ ಮಹಾನ್‌ ದೇಶವಾಗಿ ರೂಪಿಸಹೊರಟಿರುವ ಟ್ರಂಪ್ ಅವರು, ಮೋದಿ ಕೂಡಾ ಭಾರತವನ್ನು ಮಹಾನ್ ರಾಷ್ಟ್ರವಾಗಿ ಮಾಡಬೇಕೆಂದು ನಿರೀಕ್ಷಿಸುತ್ತಾರೆ’’ ಎಂದರು.

ಜಾಗತಿಕವಾಗಿ ತೊಡಗಿಸಿಕೊಳ್ಳುವುದರಿಂದ ವಿರಾಮವನ್ನು ಪಡೆಯುವ ಬದಲು ಅಮೆರಿಕವು ಪಾಲುದಾರಿಕೆಯನ್ನು ಬಲಪಡಿಸಲು ಬಯಸುತ್ತಿದೆ. ನಾವು ಸಹಕಾರಕ್ಕೆ ಮುಕ್ತರಾಗಿದ್ದೇವೆ. ಅಮೆರಿಕವನ್ನು ಮತ್ತೊಮ್ಮೆ ಬಲಿಷ್ಠರಾಷ್ಟ್ರವಾಗಿ ಮಾಡಲು ನಾವು ಬಸುತ್ತಿದ್ದೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News