×
Ad

ಸ್ವದೇಶಿ ನಿರ್ಮಿತ ಹೃದಯದ ಸ್ಟೆಂಟ್‌ಗೆ ಜಾಗತಿಕ ಮನ್ನಣೆ : ಅಮೆರಿಕದ ಸಾಧನಕ್ಕಿಂತ ಉತ್ತಮ ನಿರ್ವಹಣೆ ಪ್ರದರ್ಶಿಸಿದ ಭಾರತದ ‘ಸುಪ್ರಾಫ್ಲೆಕ್ಸ್’

Update: 2025-10-30 21:35 IST

ಸಾಂದರ್ಭಿಕ ಚಿತ್ರ | Photo Credit : freepik.com

ಹೊಸದಿಲ್ಲಿ,ಅ.30: ಭಾರತದಲ್ಲಿ ತಯಾರಾದ ಹೊಸ ತಲೆಮಾರಿನ ಹೃದಯದ ಸ್ಟೆಂಟ್ ಹೃದಯಾಘಾತದ ಅತ್ಯಧಿಕ ಅಪಾಯವಿರುವ ರೋಗಿಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ವೈಫಲ್ಯವನ್ನು ದಾಖಲಿಸಿದೆ. ಇದರೊಂದಿಗೆ ಭಾರತೀಯ ವೈದ್ಯಕೀಯ ಸಂಶೋಧನೆಯೊಂದು ಜಾಗತಿಕ ಮಟ್ಟದಲ್ಲಿ ಮಹತ್ವದ ಮನ್ನಣೆಯನ್ನು ಸಾಧಿಸಿದಂತಾಗಿದೆ.

ಬುಧವಾರ ಸಮಾರೋಪಗೊಂಡ ಜಾಗತಿಕ ಹೃದ್ರೋಗ ತಜ್ಞರ ಸಮಾವೇಶದಲ್ಲಿ, ಖ್ಯಾತ ಭಾರತೀಯ ಹೃದಯತಜ್ಞ, ದಿಲ್ಲಿಯ ಬಾತ್ರಾ ಆಸ್ಪತ್ರೆಯ ಅಧ್ಯಕ್ಷ ಹಾಗೂ ಡೀನ್ ಡಾ. ಉಪೇಂದ್ರ ಕೌಲ್ ಅವರು ಭಾರತದಲ್ಲಿ ತಯಾರಾದ ಹೃದಯ ಸ್ಟೆಂಟ್‌ನ ಪ್ರಾಯೋಗಿಕ ಪರೀಕ್ಷಾ ಫಲಿತಾಂಶಗಳ ವಿವರಗಳನ್ನು ಮಂಡಿಸಿದರು. ಟುಕ್ಸೆಡೊ-2 ಎಂದು ಹೆಸರಿಸಲಾದ ಈ ಪ್ರಾಯೋಗಿಕ ಪರೀಕ್ಷೆಯಲ್ಲಿ, ಭಾರತದಲ್ಲಿ ತಯಾರಾದ ಹೃದಯದ ಸ್ಟೆಂಟ್ ಸುಪ್ರಾಫ್ಲೆಕ್ಸ್ ಕ್ರೂಝ್ ಅನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಕ್ಸಿಯೆನ್ಸ್‌ನ ನಿರ್ವಹಣೆಯೊಂದಿಗೆ ತುಲನೆ ಮಾಡಲಾಗಿತ್ತು.

66 ಭಾರತೀಯ ಹೃದ್ರೋಗ ಕೇಂದ್ರಗಳಲ್ಲಿ ಆಯೋಜಿಸಲಾದ ಈ ಪ್ರಾಯೋಗಿಕ ಪರೀಕ್ಷೆಯು ಮಧುಮೇಹ ಹಾಗೂ ಹೃದಯನಾಳಗಳ ರೋಗ ಸೇರಿದಂತೆ ಅತ್ಯಂತ ಸಂಕೀರ್ಣವಾದ ಕಾಯಿಲೆಗಳಿರುವ ರೋಗಿಗಳನ್ನು ಕೇಂದ್ರೀಕರಿಸಿ ಈ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗಿತ್ತು.

ಭಾರತದ 66 ಹೃದ್ರೋಗ ಚಿಕಿತ್ಸಾ ಕೇಂದ್ರಗಳಲ್ಲಿ ನಡೆದ ಈ ಪ್ರಾಯೋಗಿಕ ಪರೀಕ್ಷೆಯಲ್ಲಿ ಭಾರತದ ಉಪಕರಣವು ಅಮೋಘವಾದ ಸಕಾರಾತ್ಮಕ ಫಲಿತಾಂಶವನ್ನು ನೀಡಿದ್ದು, ಸ್ಥಾಪಿತ ಅಂತಾರಾಷ್ಟ್ರೀಯ ಮಾನದಂಡದ ಮುಂದೆ ಭಾರತದ ಸುಪ್ರಾಫ್ಲೆಕ್ಸ್ ಕ್ರೂಝ್ ಕೆಳಮಟ್ಟದಲ್ಲಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಡಾ. ಕೌಲ್ ತಿಳಿಸಿದರು.

ಸೂರತ್‌ನ ಕಂಪೆನಿಯೊಂದು ತಯಾರಿಸಿದ ಈ ಸ್ಟೆಂಟ್, ಒಂದು ವರ್ಷದಲ್ಲಿ ಸಂಖ್ಯಾತ್ಮಕವಾಗಿ ಅತ್ಯಂತ ಕಡಿಮೆ ದರದ ಹೃದಯಾಘಾತವನ್ನು ಪ್ರದರ್ಶಿಸಿದೆ ಎಂದವರು ತಿಳಿಸಿದರು.

ಡಾ.ಕೌಲ್, ಡಾ.ಶ್ರೀಪಾಲ್ ಬೆಂಗಳೂರು ಹಾಗೂ ಯೋನಜಾ ನಿರ್ದೇಶಕಿ ಡಾ. ಪ್ರಿಯದರ್ಶಿನಿ ಆರಂಭಂ ನೇತೃತ್ವದಲ್ಲಿ ಈ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News