×
Ad

ಹೊಸ ವರ್ಷಕ್ಕೆ ಮೊದಲು ದಾಖಲೆ ಏರಿಕೆ ಕಂಡ ಚಿನ್ನ-ಬೆಳ್ಳಿ!

Update: 2025-12-26 12:13 IST

ಸಾಂದರ್ಭಿಕ ಚಿತ್ರ (AI)

ಕಳೆದೆರಡು ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದ್ದ ಚಿನ್ನ ಇದೀಗ ಶುಕ್ರವಾರ ದಾಖಲೆ ಏರಿಕೆ ಕಂಡಿದೆ. ಮಂಗಳೂರು ಮತ್ತು ವಿವಿಧ ನಗರಗಳಲ್ಲಿ ಚಿನ್ನದ ಬೆಲೆಯಷ್ಟು ಎಂಬ ವಿವರ ಇಲ್ಲಿದೆ.

ಕ್ರಿಸ್ಮಸ್ ಹಬ್ಬ ಮುಗಿದು ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ. ಸಾಮಾನ್ಯವಾಗಿ ಹೊಸ ವರ್ಷದ ಆರಂಭದಲ್ಲಿ ಚಿನ್ನದ ಬೆಲೆ ಏರುವುದು ವಾಡಿಕೆ. ಕಳೆದೆರಡು ದಿನಗಳಲ್ಲಿ ಅಲ್ಪಮಟ್ಟಿಗೆ ಏರಿಕೆಯಾಗಿದ್ದ ಚಿನ್ನ ಇಂದು ಶುಕ್ರವಾರ ಸಾರ್ವಕಾಲಿಕ ಏರಿಕೆ ಕಂಡುಬಂದಿದೆ.

ಫೆಡ್ ದರ ಕಡಿತದ ಬೆಟ್ ಗಳಲ್ಲಿ ಏರಿಕೆಯಾಗಿರುವುದು ಮತ್ತು ಅಮೆರಿಕ- ವೆನೆಜುವೆಲಾ ನಡುವಿನ ಉದ್ವಿಗ್ನತೆಯಿಂದಾಗಿ ಬೆಳ್ಳಿಯ ದರದಲ್ಲೂ ಶೇ 4ರಷ್ಟು ಏರಿಕೆಯಾಗಿದೆ. ಶುಕ್ರವಾರ ಚಿನ್ನ ಶೇ 0.65 ರಷ್ಟು ಏರಿಕೆಯಾಗಿ 10 ಗ್ರಾಂಗೆ 1,38,994 ರೂ. ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದರೆ, ಬೆಳ್ಳಿ ಶುಕ್ರವಾರದಂದು ಶೇ 4 ರಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ 2,32,741 ರೂ. ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ.

ಮಂಗಳೂರಿನಲ್ಲಿ ಇಂದು ಚಿನ್ನದ ದರವೆಷ್ಟು?

ಶುಕ್ರವಾರ ಡಿಸೆಂಬರ್ 26ರಂದು ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ದಾಖಲೆ ಏರಿಕೆಯಾಗಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 14,002 (+77) ರೂ., ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 12,835(+70) ರೂ., ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ 10,502 (+58) ರೂ. ಬೆಲೆಗೆ ತಲುಪಿದೆ.

ಭಾರತದಲ್ಲಿ ಇಂದಿನ ಚಿನ್ನದ ಬೆಲೆ

ಬೆಳಗಿನ ವಹಿವಾಟಿನಲ್ಲಿ ಹತ್ತು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 1,39,220 ರೂ., ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 1,27,640 ರೂ., ಮತ್ತು ಹತ್ತು ಗ್ರಾಂ 18 ಕ್ಯಾರೆಟ್ ಚಿನ್ನ 1,04,410 ರೂ. ಬೆಲೆಗೆ ತಲುಪಿದೆ.

ಬೆಂಗಳೂರು

24 ಕ್ಯಾರಟ್: 1,39,260 ರೂ.

22 ಕ್ಯಾರಟ್: 1,27,660 ರೂ.

ದೆಹಲಿ

24 ಕ್ಯಾರಟ್: 1,39,410 ರೂ.

22 ಕ್ಯಾರಟ್: 1,27,810 ರೂ.

ಚೆನ್ನೈ

24 ಕ್ಯಾರಟ್: 1,39,870 ರೂ.

22 ಕ್ಯಾರಟ್: 1,28,210 ರೂ.

ಹೈದರಾಬಾದ್

24 ಕ್ಯಾರಟ್: 1,39,260 ರೂ.

22 ಕ್ಯಾರಟ್: 1,27,660 ರೂ.

ವಿಜಯವಾಡ / ವಿಶಾಖಪಟ್ಟಣಂ

24 ಕ್ಯಾರಟ್: 1,39,260 ರೂ.

22 ಕ್ಯಾರಟ್: 1,27,660 ರೂ.

ಬೆಳ್ಳಿ ಬೆಲೆಯಲ್ಲೂ ದಾಖಲೆ ಏರಿಕೆ

ಚಿನ್ನದ ಬೆಲೆಗೆ ಸಮಾನವಾಗಿ ಬೆಳ್ಳಿಯ ದರವೂ ಹೊಸ ದಾಖಲೆಗಳನ್ನು ತಲುಪುತ್ತಿದೆ. ಕೈಗಾರಿಕಾ ಬಳಕೆ ಹಾಗೂ ಹೂಡಿಕೆ ಆಸಕ್ತಿ ಹೆಚ್ಚುತ್ತಿರುವುದರಿಂದ ಬೆಳ್ಳಿ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ಬೆಂಗಳೂರು: ಕಿಲೋ ಬೆಳ್ಳಿ 2,34,100 ರೂ.

ಹೈದರಾಬಾದ್: ಕಿಲೋ ಬೆಳ್ಳಿ 2,45,100 ರೂ.

ವಿಜಯವಾಡ / ವಿಶಾಖಪಟ್ಟಣಂ: 2,45,100 ರೂ.

ಚೆನ್ನೈ: 2,45,100 ರೂ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News