ಇತಿಹಾಸದಲ್ಲಿ ಮೊದಲ ಬಾರಿಗೆ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ; ಮೇಯರ್ ಆಗಿ ವಿ. ವಿ. ರಾಜೇಶ್ ಆಯ್ಕೆ
Update: 2025-12-26 16:07 IST
ವಿ. ವಿ. ರಾಜೇಶ್ | Photo Credit : @NewIndianXpress , X
ಕೊಚ್ಚಿ: ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ಕೊಡಂಗನೂರು ವಾರ್ಡ್ ಕೌನ್ಸಿಲರ್ ವಿ.ವಿ. ರಾಜೇಶ್ ತಿರುವನಂತಪುರಂ ಮಹಾ ನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ವಿ.ವಿ. ರಾಜೇಶ್ ಅವರು 50 ಬಿಜೆಪಿ ಕೌನ್ಸಿಲರ್‌ಗಳು ಮತ್ತು ಒಬ್ಬ ಸ್ವತಂತ್ರ ಸದಸ್ಯರ ಬೆಂಬಲವನ್ನು ಪಡೆದಿದ್ದಾರೆ. ಯುಡಿಎಫ್ ಅಭ್ಯರ್ಥಿ ಕೆ.ಎಸ್. ಶಬರಿನಾಥನ್ 17 ಮತಗಳನ್ನು ಪಡೆದರೆ, ಎಲ್‌ಡಿಎಫ್ ಮೇಯರ್ ಅಭ್ಯರ್ಥಿ ಆರ್‌ಪಿ ಶಿವಾಜಿ 29 ಮತಗಳನ್ನು ಪಡೆದಿದ್ದಾರೆ.
ಈ ಮೊದಲು ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ಕೊಡಂಗನೂರು ವಾರ್ಡ್ ಕೌನ್ಸಿಲರ್ ವಿ.ವಿ. ರಾಜೇಶ್ ಅವರನ್ನು ತಿರುವನಂತಪುರಂ ಮಹಾನಗರ ಪಾಲಿಕೆಯ ಮೇಯರ್ ಹುದ್ದೆಗೆ ಹಾಗೂ ಕರುಮಂ ವಾರ್ಡ್ ಕೌನ್ಸಿಲರ್ ಜಿ.ಎಸ್. ಆಶಾ ನಾಥ್ ಅವರನ್ನು ಉಪ ಮೇಯರ್ ಹುದ್ದೆಗೆ ಬಿಜೆಪಿ ಹೆಸರಿಸಿತ್ತು.