×
Ad

ರಾಮಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆಯಲ್ಲಿ ಜಮೀನು ಖರೀದಿಸಿದ ಅಮಿತಾಭ್ ಬಚ್ಚನ್: ವರದಿ

Update: 2024-01-15 19:05 IST

ಅಮಿತಾಭ್ ಬಚ್ಚನ್ | Photo: PTI  

ಮುಂಬೈ: ಅಯೋಧ್ಯೆಯಲ್ಲಿನ ಸೆವೆನ್ ಸ್ಟಾರ್ ಎನ್ ಕ್ಲೇವ್ ಆದ ಸರಯುನಲ್ಲಿ ಮುಂಬೈ ಮೂಲದ ದಿ ಹೌಸ್ ಆಫ್ ಅಭಿನಂದನ್ ಲೋಧಾ ಅಭಿವೃದ್ಧಿ ಪಡಿಸಿರುವ ಜಮೀನನ್ನು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ.

The Hindustan Times ಪತ್ರಿಕೆಯ ಪ್ರಕಾರ, ಆ ಜಮೀನಿನ ಬೆಲೆ ಸರಿಸುಮಾರು ರೂ. 14.5 ಕೋಟಿ ಆಗಿದೆ.

“ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿರುವ ಅಯೋಧ್ಯೆಯಲ್ಲಿನ ಸರಯು ನಗರಕ್ಕೆ ದಿ ಹೌಸ್ ಆಫ್ ಅಭಿನಂದನ್ ಲೋಧಾದೊಂದಿಗೆ ಪಯಣಿಸಲು ಎದುರು ನೋಡುತ್ತಿದ್ದೇನೆ. ಕಾಲಾತೀತ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಹಿರಿಮೆಯನ್ನು ಹೊಂದಿರುವ ಅಯೋಧ್ಯೆಯೊಂದಿಗೆ ಭೌಗೋಳಿಕ ಗಡಿಯನ್ನು ಮೀರಿ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ಸೀಮಾತೀತ ಸಾಂಪ್ರದಾಯಿಕತೆ ಹಾಗೂ ಆಧುನಿಕತೆಯನ್ನು ಒಟ್ಟಿಗೆ ಒಳಗೊಂಡು, ನನ್ನೊಳಗೆ ಆಳವಾದ ಭಾವನಾತ್ಮಕ ಸಂವೇದನೆಯನ್ನು ಸೃಷ್ಟಿಸುವ ಅಯೋಧ್ಯೆಯ ಆತ್ಮದೊಳಕ್ಕೆ ಇದು ಹೃದಯಪೂರ್ವಕ ಪ್ರಯಾಣವಾಗಿದೆ. ನಾನು ಜಾಗತಿಕ ಆಧ್ಯಾತ್ಮಿಕ ರಾಜಧಾನಿಯಲ್ಲಿ ಮನೆಯೊಂದನ್ನು ನಿರ್ಮಿಸಲು ಎದುರು ನೋಡುತ್ತಿದ್ದೇನೆ” ಎಂದು ಅಮಿತಾಭ್ ಬಚ್ಚನ್ ಹೇಳಿದ್ದಾರೆ ಎಂದು ಪತ್ರಿಕೆಯು ವರದಿ ಮಾಡಿದೆ.

ವರದಿಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟಿಸಲಿರುವ ಜನವರಿ 22ರಂದೇ ಸರಯುಗೂ ಚಾಲನೆ ದೊರೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News