×
Ad

“ಅಮಿತಾಬ್ ಬಚ್ಚನ್ ನಮ್ಮ ಭಾರತ ರತ್ನ”: ಬಚ್ಚನ್ ಕುಟುಂಬ ಭೇಟಿಯಾದ ಮಮತಾ ಬ್ಯಾನರ್ಜಿ

Update: 2023-08-30 22:40 IST

Photo: ANI 

ಮುಂಬೈ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರನ್ನು ಮುಂಬೈನಲ್ಲಿರುವ ಬಚ್ಚನ್ ನಿವಾಸದಲ್ಲಿ ಭೇಟಿಯಾದರು.

ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ನಡೆಯಲಿರುವ ವಿಪಕ್ಷಗಳ ಮೈತ್ರಿಕೂಟದ ಎರಡು ದಿನಗಳ ಸಭೆಯಲ್ಲಿ ಭಾಗವಹಿಸಲು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಮತಾ ಬ್ಯಾನರ್ಜಿ ಅವರು, ಅಲ್ಲಿಂದ ಬಚ್ಚನ್ ಅವರ ನಿವಾಸಕ್ಕೆ ತೆರಳಿದರು.

ಕಳೆದ ವರ್ಷದ ಕೋಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಬಚ್ಚನ್ ಭಾಗವಹಿಸಿದ್ದಾಗ ಬಚ್ಚನ್ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಭಾರತ ರತ್ನವನ್ನು ನೀಡಬೇಕೆಂದು ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದರು.

ಬಚ್ಚನ್ ಮತ್ತು ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ಕೋಲ್ಕತ್ತಾಗೆ ಭೇಟಿ ನೀಡುವಂತೆ ಬಚ್ಚನ್‌ರನ್ನು ಆಹ್ವಾನಿಸಿರುವುದಾಗಿ ತಿಳಿಸಿದ್ದಾರೆ.

"ಅಮಿತ್ ಜಿ ನಮ್ಮ ಭಾರತ ರತ್ನ, ಅವರ ಕುಟುಂಬವೂ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದೆ" ಎಂದು ಅವರು ಹೇಳಿದರು.

"ಇಂದು ನಾನು ಅಮಿತ್ ಜಿಗೆ ರಾಖಿ ಕಟ್ಟಿದ್ದೇನೆ. ಇದು (ನನ್ನ ಪಾಲಿಗೆ) ದೊಡ್ಡ ದಿನ" ಎಂದು ಬ್ಯಾನರ್ಜಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News