×
Ad

ಎ.ಪಿ. ಉಸ್ತಾದ್‌ರಿಗೆ ʼಶ್ರೀನಾರಾಯಣ ಗುರು ಸಾಹೋದರ್ಯʼ ಪ್ರಶಸ್ತಿ ಪ್ರದಾನ

Update: 2026-01-14 21:56 IST

ಆಲಪ್ಪುಝ: ಸ್ವಾಮಿ ಶಾಶ್ವತೀಕಾನಂದ ಸಾಂಸ್ಕೃತಿಕ ಕೇಂದ್ರದಿಂದ ಸ್ಥಾಪಿಸಲಾದ ಶ್ರೀನಾರಾಯಣ ಗುರು ಸಾಹೋದರ್ಯ ಪ್ರಥಮ ಪ್ರಶಸ್ತಿಯನ್ನು ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ (ಎ.ಪಿ. ಉಸ್ತಾದ್) ಅವರಿಗೆ ಪ್ರದಾನ ಮಾಡಲಾಯಿತು.

ಕಾಯಂಕುಳಂನಲ್ಲಿ ನಡೆದ ‘ಕೇರಳ ಯಾತ್ರಾ ಸ್ವಾಗತ ಸಮಾರಂಭ’ದ ವೇದಿಕೆಯಲ್ಲಿ ಈ ಪ್ರಶಸ್ತಿ ನೀಡಲಾಯಿತು.

ಎಸ್‌.ಎನ್‌.ಡಿ.ಪಿ. ಯೋಗಂನ ಮಾಜಿ ಅಧ್ಯಕ್ಷ ಗೋಕುಳಂ ಗೋಪಾಲನ್, ಮಂಡಳಿಯ ಮಾಜಿ ಸದಸ್ಯ ವಕೀಲರಾದ ಎಸ್. ಚಂದ್ರಸೇನನ್ ಹಾಗೂ ಶಾಶ್ವತೀಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ವಿ.ಆರ್. ಅನೂಪ್ ಅವರು ಪ್ರಶಸ್ತಿಯನ್ನು ಪ್ರದಾನಿಸಿದರು.

ಕಾರ್ಯಕ್ರಮದಲ್ಲಿ ಸಚಿವರು, ಜನಪ್ರತಿನಿಧಿಗಳು ಹಾಗೂ ವಿವಿಧ ಸಮುದಾಯ ಮತ್ತು ರಾಜಕೀಯ ನಾಯಕರು ಭಾಗವಹಿಸಿದ್ದರು.

ಹಿಂದುಳಿದ ವರ್ಗಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪುನರುತ್ಥಾನಕ್ಕೆ ದಾರಿ ಮಾಡಿಕೊಡುವಲ್ಲಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ನಡೆಸಿದ ಹೋರಾಟಗಳು ಹಾಗೂ ಸಮಾಜಮುಖಿ ಕಾರ್ಯಗಳಿಗೆ ಗೌರವ ಸೂಚಿಸಲು ಈ ಪ್ರಶಸ್ತಿಯನ್ನು ನೀಡಲಾಗಿದೆ.

ಗುರು ಚಿಂತನೆಗಳನ್ನು ಅರ್ಥಪೂರ್ಣವಾಗಿ ಅಳವಡಿಸಿಕೊಂಡು ಕೇರಳವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರ ವಹಿಸಿದ ವ್ಯಕ್ತಿತ್ವಗಳನ್ನು ಗುರುತಿಸಿ ಗೌರವಿಸುವ ಧ್ಯೇಯದ ಭಾಗವಾಗಿ ‘ಶ್ರೀನಾರಾಯಣ ಗುರು ಸಾಹೋದರ್ಯ ಪ್ರಶಸ್ತಿ’ಗಾಗಿ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿಯ ಸದಸ್ಯರಾದ ವಕೀಲ ಸಿ.ಕೆ. ವಿದ್ಯಾಸಾಗರ್, ರಾಜ್ಯಸಭೆಯ ಮಾಜಿ ಸದಸ್ಯ ಸಿ. ಹರಿದಾಸ್ ಹಾಗೂ ಎಂ.ಜಿ. ವಿಶ್ವವಿದ್ಯಾಲಯ ಸ್ಕೂಲ್ ಆಫ್ ಸೋಶಿಯಲ್ ಸೈನ್ಸ್ ನ ಪ್ರಾಧ್ಯಾಪಕ ಡಾ. ರಾಜೇಶ್ ಕೋಮತ್ ಅವರು ತಿಳಿಸಿದ್ದಾರೆ.

ಪ್ರಶಸ್ತಿಯು ಒಂದು ಲಕ್ಷ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಫಲಕವನ್ನು ಒಳಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News