ಲೋಕಸಭಾ ಚುನಾವಣೆ: ಪತ್ನಿಗೆ ಟಕೆಟ್ ಸಿಗದಿದ್ದಕ್ಕೆ ಕಾಂಗ್ರೆಸ್ ತೊರೆದ ಶಾಸಕ
Image Source : FACEBOOK
ಗುವಾಹಟಿ: ಅಸ್ಸಾಮಿನ ಲಖಿಮಪುರ ಜಿಲ್ಲೆಯ ನೋಬೊಯಿಚಾ ಕ್ಷೇತ್ರದ ಶಾಸಕ ಭರತ ಚಂದ್ರ ನಾರಾ ಅವರು ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತನ್ನ ಪತ್ನಿಗೆ ಕಾಂಗ್ರೆಸ್ ಲೋಕಸಭಾ ಟಿಕೆಟ್ ನಿರಾಕರಿಸಿದ್ದು ನಾರಾ ರಾಜೀನಾಮೆಗೆ ಕಾರಣವೆನ್ನಲಾಗಿದೆ.
ತನ್ನ ಒಂದು ಸಾಲಿನ ರಾಜೀನಾಮೆ ಪತ್ರವನ್ನು ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ರವಾನಿಸಿದ್ದಾರೆ.
ರವಿವಾರ ಅವರು ಅಸ್ಸಾಂ ಕಾಂಗ್ರೆಸ್ ನ ಮಾಧ್ಯಮ ಘಟಕಕ್ಕೆ ರಾಜೀನಾಮೆ ನೀಡಿದ್ದರು.
ಕಾಂಗ್ರೆಸ್ ಅಸ್ಸಾಮಿಗಾಗಿ ತನ್ನ ಲೋಕಸಭಾ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಮಾ.12ರಂದು ಪ್ರಕಟಿಸಿದ್ದು, ಉದಯ ಶಂಕರ ಹಝಾರಿಕಾ ಅವರನ್ನು ಲಖಿಮಪುರ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ನಾರಾ ಅವರ ಪತ್ನಿ, ಲಖಿಮಪುರ ಕ್ಷೇತ್ರದಿಂದ ಮೂರು ಸಲ ಸಂಸದೆಯಾಗಿದ್ದ ಮಾಜಿ ಕೇಂದ್ರ ಸಚಿವೆ ರಾನೀ ನಾರಾ ಮತ್ತು ಕೆಲವು ತಿಂಗಳುಗಳ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಹಝಾರಿಕಾ ಟಿಕೆಟ್ ಗಾಗಿ ನಿಕಟ ಪೈಪೋಟಿಯಲ್ಲಿದ್ದರು.