×
Ad

ಗಾಯಕ ಝುಬೀನ್​ ಗರ್ಗ್​ ಸಾವು: ವ್ಯವಸ್ಥಾಪಕ​ ಸಿದ್ಧಾರ್ಥ್ ಶರ್ಮಾ, ಸಂಘಟಕನ ನಿವಾಸಗಳ ಮೇಲೆ ಎಸ್‌ಐಟಿ ದಾಳಿ

Update: 2025-09-26 14:12 IST

ಝುಬೀನ್ ಗರ್ಗ್ (Photo: PTI)

ಗುವಾಹಟಿ: ಇತ್ತೀಚೆಗೆ ಮೃತಪಟ್ಟ ಗಾಯಕ ಝುಬೀನ್ ಗರ್ಗ್ ಅವರ ವ್ಯವಸ್ಥಾಪಕ ಸಿದ್ಧಾರ್ಥ ಶರ್ಮ ಹಾಗೂ ʼNortheast India Festivalʼ ಕಾರ್ಯಕ್ರಮ ಆಯೋಜಿಸಿದ್ದ ಸಂಘಟಕ ಶ್ಯಾಮ್ ಕಾನು ಮಹಂತರ ಮನೆಗಳ ಮೇಲೆ ಗುರುವಾರ ವಿಶೇಷ ತನಿಖಾ ತಂಡ (SIT) ದಾಳಿ ನಡೆಸಿದೆ ಎಂದು ವರದಿಯಾಗಿದೆ.

ಅಸ್ಸಾಂನ ಜನಪ್ರಿಯ ಗಾಯಕರಾದ ಝುಬೀನ್ ಗರ್ಗ್ ಸೆಪ್ಟೆಂಬರ್ 19ರಂದು ಸಿಂಗಾಪುರದಲ್ಲಿ ಮೃತಪಟ್ಟಿದ್ದರು. ಮಹಂತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮರುದಿನ ʼಯಾಚ್ ಪ್ರವಾಸʼ ನಡೆಸುವಾಗ ಝುಬೀನ್ ಗರ್ಗ್ ಮೃತಪಟ್ಟಿದ್ದರು.

ಸೆಪ್ಟೆಂಬರ್ 20ರಂದು ಸಿಂಗಾಪುರ ಪ್ರಾಧಿಕಾರಗಳು ನೀಡಿರುವ ಮರಣ ಪ್ರಮಾಣ ಪತ್ರದ ಪ್ರಕಾರ, ಝುಬೀನ್ ಗರ್ಗ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 21ರಂದು 21 ಸುತ್ತು ಗುಂಡು ಹಾರಿಸುವ ಮೂಲಕ ಸಕಲ ಸರಕಾರಿ ಗೌರವಗಳೊಂದಿಗೆ ಗುವಾಹಟಿಯಲ್ಲಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿತ್ತು.

ಝುಬೀನ್ ಗರ್ಗ್ ಮೃತಪಟ್ಟ ನಂತರ, ಶರ್ಮಾ ಹಾಗೂ ಮಹಂತ ವಿರುದ್ಧ ಸುಮಾರು 50ಕ್ಕೂ ಹೆಚ್ಚು ಎಫ್ಐಆರ್ ಗಳು ದಾಖಲಾಗಿದ್ದವು. ಇದರ ಬೆನ್ನಿಗೇ, ಝುಬೀನ್ ಗರ್ಗ್ ಸಾವಿನ ಕುರಿತು ತನಿಖೆ ನಡೆಸಲು ಅಸ್ಸಾಂ ಪೊಲೀಸರು ಪೊಲೀಸ್ ಮಹಾ ನಿರ್ದೇಶಕ ಎಂ.ಪಿ.ಗುಪ್ತಾ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News