×
Ad

ಬ್ಯಾಂಕ್ ಸಿಬ್ಬಂದಿ ಗ್ರಾಹಕರೊಂದಿಗೆ ಸ್ಥಳೀಯ ಭಾಷೆಯಲ್ಲಿ ಮಾತನಾಡಬೇಕು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

Update: 2025-11-07 20:59 IST

ನಿರ್ಮಲಾ ಸೀತಾರಾಮನ್ | Photo Credit : PTI

 

ಹೊಸದಿಲ್ಲಿ, ನ. 7: ಪ್ರತಿ ಶಾಖೆಗಳಲ್ಲಿ ಸಿಬ್ಬಂದಿಯು ಗ್ರಾಹಕರೊಂದಿಗೆ ಸ್ಥಳೀಯ ಭಾಷೆಗಳಲ್ಲಿ ಮಾತನಾಡುವಂತೆ ನೋಡಿಕೊಳ್ಳುವಂತೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಕರೆ ನೀಡಿದ್ದಾರೆ.

‘‘ನಮ್ಮ ಮಾನವ ಸಂಪನ್ಮೂಲ ನೀತಿಯನ್ನು ಸಮರ್ಥಿಸಲು ನನಗೆ ಕಷ್ಟವಾಗುತ್ತದೆ. ಸ್ಥಳೀಯ ಭಾಷೆಯ ಗಂಧವೇ ಇಲ್ಲದ ಜನರನ್ನು ನಾವು ವಿವಿಧ ಸ್ಥಳಗಳಿಗೆ ನೇಮಿಸುತ್ತೇವೆ’’ ಎಂದು ಅವರು ಹೇಳಿದರು. ‘‘ವ್ಯಕ್ತಿಗತ ಸಂಬಂಧವು ಭಾರತೀಯ ಬ್ಯಾಂಕಿಂಗ್‌ ನ ಪ್ರಧಾನ ಲಕ್ಷಣವಾಗಿದೆ. ಶಾಖೆಯೊಂದಕ್ಕೆ ನೇಮಿಸಲಾದ ಪ್ರತಿಯೊಬ್ಬ ಸಿಬ್ಬಂದಿ ಸ್ಥಳೀಯ ಭಾಷೆ ಮಾತನಾಡಬೇಕು. ಸ್ಥಳೀಯ ಭಾಷಾ ಪ್ರಾವೀಣ್ಯತೆಯು ನಿರ್ವಹಣಾ ಮಾನದಂಡವಾಗಬೇಕು’’ ಎಂದು ನಿರ್ಮಲಾ ಹೇಳಿದರು.

ಹಳೆಯ ಮಾದರಿಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಸ ತಂತ್ರಜ್ಞಾನದೊಂದಿಗೆ ಬೆಸೆಯುವಂತೆ ಅವರು ಬ್ಯಾಂಕ್‌ ಗಳನ್ನು ಒತ್ತಾಯಿಸಿದರು. ತಂತ್ರಜ್ಞಾನವನ್ನು ಗ್ರಾಹಕ ವಲಯವನ್ನು ವಿಸ್ತರಿಸಲು ಬಳಸಬೇಕೇ ಹೊರತು, ಮಾನವ ಸಂಬಂಧಕ್ಕೆ ಬದಲಿಯಾಗಿ ಅಲ್ಲ ಎಂದು ಅವರು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News