ಬಿಹಾರ: ಎಐಎಂಐಎಂ ನಾಯಕನ ಗುಂಡು ಹಾರಿಸಿ ಹತ್ಯೆ
ಸಿವಾನ್: ಎಐಎಂಐಎಂನ ಜಿಲ್ಲಾಧ್ಯಕ್ಷ ಆರಿಫ್ ಜಮಾಲ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಸಿವಾನ್ ನಲ್ಲಿ ಶನಿವಾರ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಇಲ್ಲಿನ ಜಮಾಲ್ ಅವರ ಅಂಗಡಿಯ ಸಮೀಪ ನಡೆದಿದೆ. ಬೈಕ್ ನಲ್ಲಿ ಆಗಮಿಸಿದ ಮೂವರು ದುಷ್ಕರ್ಮಿಗಳು ಜಮಾಲ್ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಜಮಾಲ್ ಅವರನ್ನು ಮೊದಲು ಸದಾರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅನಂತರ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಐಎಂಐಎಂ ವಕ್ತಾರ ಆದಿಲ್ ಹಸನ್ ತನ್ನ ‘ಎಕ್ಸ್’ನ ಪೋಸ್ಟ್ ನಲ್ಲಿ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಆದಿಲ್ ಹಸನ್ ಅವರ ಪೋಸ್ಟ್ ಅನ್ನು ಎಐಎಂಐಎಂನ ವರಿಷ್ಠ ಅಸಾದುದ್ದೀನ್ ಉವೈಸಿ ಅವರು ಮರು ಪೋಸ್ಟ್ ಮಾಡಿದ್ದಾರೆ.
नीतीश-तेजस्वी सरकार में बिहार में बेलगाम बदमाशों को खुली आज़ादी मिली हुई है, नीतीश-तेजस्वी जंगल राज में शनिवार (23 दिसंबर) की देर शाम सीवान में बदमाशों ने ऑल इंडिया मजलिस-ए-इत्तेहादुल मुस्लिमीन के पूर्व संयोजक #आरिफजमाल की गोली मारकर हत्या कर दी गई है।
— AIMIM (@aimim_national) December 24, 2023
याद रहे!!! AIMIM, सीमांचल… pic.twitter.com/ZxlqrkfO6e