×
Ad

G RAM G ಮಸೂದೆ ವಿವಾದದ ನಡುವೆ ಪಶ್ಚಿಮ ಬಂಗಾಳ ಉದ್ಯೋಗ ಖಾತರಿ ಯೋಜನೆಗೆ ಗಾಂಧಿ ಹೆಸರು

Update: 2025-12-18 16:46 IST

ಮಮತಾ ಬ್ಯಾನರ್ಜಿ | Photo Credit : PTI 

ಕೋಲ್ಕತಾ: ಯುಪಿಎ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು VB G RAM G ಎಂದು ಬದಲಿಸುವ ಮಸೂದೆ ಕುರಿತು ಭುಗಿಲೆದ್ದಿರುವ ವಿವಾದದ ನಡುವೆಯೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ತನ್ನ ಸರಕಾರದ ಉದ್ಯೋಗ ಖಾತರಿ ಯೋಜನೆ ‘ಕರ್ಮಶ್ರೀ’ಗೆ ಮಹಾತ್ಮಾ ಗಾಂಧಿಯವರ ಹೆಸರನ್ನಿಡುವುದಾಗಿ ಗುರುವಾರ ಘೋಷಿಸಿದರು.

‘ಎಂನರೇಗಾ ಯೋಜನೆಯಿಂದ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದು ನಾಚಿಕೆಗೇಡು. ರಾಷ್ಟ್ರಪಿತನಿಗೆ ಗೌರವ ಸಲ್ಲಿಸಲು ಅವರಿಗೆ ಸಾಧ್ಯವಾಗದಿದ್ದರೆ,ಅದನ್ನು ನಾವು ಮಾಡುತ್ತೇವೆ’ ಎಂದು ಮಮತಾರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News