×
Ad

ಬಿಹಾರ | ಚುನಾವಣೆಗೂ ಮುನ್ನ ತೇಜ್ ಪ್ರತಾಪ್ ರಿಂದ ನೂತನ ‘ಜನ ಶಕ್ತಿ ಜನತಾ ದಳ’ ಪಕ್ಷ ಸ್ಥಾಪನೆ

Update: 2025-09-26 19:14 IST

 ತೇಜ್ ಪ್ರತಾಪ್ | PC : PTI 

ಪಾಟ್ನಾ: ಇತ್ತೀಚೆಗೆ RJD ಪಕ್ಷದಿಂದ ಉಚ್ಚಾಟಿತರಾಗಿರುವ, ಪಕ್ಷದ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್, ಬಿಹಾರದಲ್ಲಿ ಸುದೀರ್ಘ ಹೋರಾಟ ನಡೆಸಲು ಹೊಸ ಪಕ್ಷವನ್ನು ಸ್ಥಾಪಿಸಿರುವುದಾಗಿ ಶುಕ್ರವಾರ ಘೋಷಿಸಿದ್ದಾರೆ.

‘ಜನ ಶಕ್ತಿ ಜನತಾ ದಳ’ದ ರಾಷ್ಟ್ರೀಯ ಅಧ್ಯಕ್ಷ ಎಂದು ತಮ್ಮನ್ನು ತಾವು ಕರೆದುಕೊಂಡಿರುವ ಹಾಗೂ ಚುನಾವಣಾ ಚಿಹ್ನೆಯಾಗಿ ಕಪ್ಪು ಹಲಗೆ ಇರುವ ಪೋಸ್ಟರ್ ಅನ್ನು ತೇಜ್ ಪ್ರತಾಪ್ ಯಾದವ್ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

ಆದರೆ, ತೇಜ್ ಪ್ರತಾಪ್ ಯಾದವ್ ಅವರ ಪಕ್ಷ ನೋಂದಣಿಯಾಗಿರುವುದು ಹಾಗೂ ಅವರ ಪಕ್ಷಕ್ಕೆ ಚಿಹ್ನೆ ಹಂಚಿಕೆಯಾಗಿರುವ ಬಗ್ಗೆ ನನಗೆ ಇದುವರೆಗೆ ಯಾವುದೇ ಮಾಹಿತಿ ಇಲ್ಲ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದಕ್ಕೂ ಮುನ್ನ, ಅಷ್ಟೇನೂ ಚಿರಪರಿಚಿತವಲ್ಲದ ಪಕ್ಷಗಳು ನನ್ನ ನಾಯಕತ್ವದಡಿ ಮೈತ್ರಿ ಮಾಡಿಕೊಳ್ಳಲು ಮುಂದೆ ಬಂದಿವೆ ಎಂದು ಆಗಸ್ಟ್ ತಿಂಗಳಲ್ಲಿ ತೇಜ್ ಪ್ರತಾಪ್ ಯಾದವ್ ಹೇಳಿದ್ದರು. ಈ ವರ್ಷಾಂತ್ಯದಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಇತ್ತೀಚೆಗೆ ತೇಜಸ್ವಿ ಯಾದವ್ ಅವರ ನಿಕಟವರ್ತಿ ಹಾಗೂ ರಾಜ್ಯಸಭಾ ಸದಸ್ಯರೂ ಆದ ಸಂಜಯ್ ಯಾದವ್ ಅವರ ವರ್ತನೆಯ ವಿರುದ್ಧ ಸ್ಫೋಟಗೊಂಡ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಲಾಲೂ ಅವರ ಪುತ್ರಿ ರೋಹಿಣಿ ಆಚಾರ್ಯ, ತಮ್ಮ ತಂದೆ, ಸಹೋದರರಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಹಾಗೂ ಸಂಸದೆಯೂ ಆದ ತಮ್ಮ ಸಹೋದರಿ ಮೀಸಾ ಭಾರತಿ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಅನ್ ಫಾಲೊ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News