ಬಿಹಾರ ವಿಧಾನಸಭಾ ಚುನಾವಣೆ | ಎನ್‌ಡಿಎದಲ್ಲಿ ಎಲ್ಲವೂ ಸರಿಯಿದೆ, ನಿತೀಶ್ ಕುಮಾರ್ ನಮ್ಮ ಸಿಎಂ ಅಭ್ಯರ್ಥಿ: ಗಿರಿರಾಜ್ ಸಿಂಗ್
Update: 2025-10-08 20:51 IST
ನಿತೀಶ್ ಕುಮಾರ್ , ಗಿರಿರಾಜ ಸಿಂಗ್ | Photo Credit : PTI
ಪಾಟ್ನಾ,ಅ.8: ಬಿಹಾರ ವಿಧಾನಸಭಾ ಚುನಾವಣೆಗಾಗಿ ಸ್ಥಾನ ಹಂಚಿಕೆ ಕುರಿತು ಎನ್‌ಡಿಎ ಮೈತ್ರಿಕೂಟದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳನ್ನು ತಳ್ಳಿ ಹಾಕಿರುವ ಬಿಜೆಪಿಯು, ಹಾಲಿ ಸಿಎಂ ನಿತೀಶ್ ಕುಮಾರ್ ಅವರೇ ಮೈತ್ರಿಕೂಟದ ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿಯಾಗಿರಲಿದ್ದಾರೆ ಎಂದು ಹೇಳಿದೆ.
ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು,‘ಎನ್‌ಡಿಎದಲ್ಲಿ ಎಲ್ಲವೂ ಸರಿಯಿದೆ. ನಿತೀಶ್ ಕುಮಾರ್ ಮುಖ್ಯಮಂತ್ರಿ ಹುದ್ದೆಗೆ ನಮ್ಮ ಅಭ್ಯರ್ಥಿಯಾಗಿರಲಿದ್ದಾರೆ. ಸ್ಥಾನ ಹಂಚಿಕೆ ಕುರಿತು ಎನ್‌ಡಿಎ ಪಾಲುದಾರರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಆ ಕುರಿತು ಮಾತುಕತೆಗಳು ಪ್ರಗತಿಯಲ್ಲಿವೆ ಮತ್ತು ಅಂತಿಮ ಸೂತ್ರ ಶೀಘ್ರವೇ ರೂಪುಗೊಳ್ಳಲಿದೆ’ ಎಂದು ತಿಳಿಸಿದರು.
ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟವನ್ನು ಟೀಕಿಸಿದ ಅವರು, ಮಹಾಘಟಬಂಧನ್ ಒಡೆದ ಮನೆಯಾಗಿದೆ ಎಂದರು.