ಬಿಹಾರ ಜಾತಿಯಾಧಾರಿತ ಸಮೀಕ್ಷೆ ಪೂರ್ಣ:ಮುಖ್ಯಮಂತ್ರಿ ನಿತೀಶ್ ಕುಮಾರ್
Update: 2023-08-25 23:28 IST
ನಿತೀಶ್ ಕುಮಾರ್ | Photo: PTI
ಪಾಟ್ನಾ: ರಾಜ್ಯದಲ್ಲಿ ಜಾತಿಯಾಧಾರಿತ ಸಮೀಕ್ಷೆಯು ಪೂರ್ಣಗೊಂಡಿದೆ ಮತ್ತು ರಾಜ್ಯದಲ್ಲಿಯ ವಿವಿಧ ಜಾತಿಗಳ ಸಾಮಾಜಿಕ-ಆರ್ಥಿಕ ಸ್ಥಿತಿಗಳ ನೈಜ ಚಿತ್ರಣವನ್ನು ಮಂಡಿಸಲು ಅದನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶುಕ್ರವಾರ ಇಲ್ಲಿ ತಿಳಿಸಿದರು.
ರಾಷ್ಟ್ರಮಟ್ಟದಲ್ಲಿ ಜಾತಿಯಾಧಾರಿತ ಸಮೀಕ್ಷೆಯನ್ನು ನಡೆಸಲಾಗಿಲ್ಲ,ಹೀಗಾಗಿ ರಾಜ್ಯದಲ್ಲಿ ಅದನ್ನು ಕೈಗೊಳ್ಳಲಾಯಿತು ಎಂದು ಒತ್ತಿ ಹೇಳಿದ ಅವರು,ಇದರಿಂದ ಸಮಾಜದ ಎಲ್ಲ ವರ್ಗಗಳಿಗೂ ಅನುಕೂಲವಾಗಲಿದೆ ಎಂದರು. ಸರಕಾರವು ದತ್ತಾಂಶಗಳನ್ನು ಶೀಘ್ರವೇ ಬಹಿರಂಗಗೊಳಿಸಲಿದೆ ಎಂದೂ ಅವರು ತಿಳಿಸಿದರು.