×
Ad

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಶೂನ್ಯಸಾಧನೆ ದಾಖಲಿಸಿದ ವಿಐಪಿ

ಮಹಾಘಟಬಂಧನ್ ನ ಡಿಸಿಎಂ ಅಭ್ಯರ್ಥಿಯಾಗಿದ್ದ ವಿಐಪಿ ಮುಖ್ಯಸ್ಥ

Update: 2025-11-14 16:39 IST

ಮುಕೇಶ್ ಸಾಹ್ನಿ (Photo: PTI)

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶಗಳು ಶುಕ್ರವಾರ ಪ್ರಕಟಗೊಂಡಿದ್ದು, ಮಹಾಘಟಬಂಧನ್‌ನ ಅಂಗಪಕ್ಷ ವಿಕಾಸಶೀಲ ಇನ್ಸಾನ್ ಪಾರ್ಟಿ(ವಿಐಪಿ) ಒಂದೇ ಒಂದು ಸ್ಥಾನವನ್ನೂ ಗೆಲ್ಲುವಲ್ಲಿ ವಿಫಲಗೊಂಡಿದೆ.

ವಿಐಪಿ 12 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.

ವಿಐಪಿ ಮುಖ್ಯಸ್ಥ ಮುಕೇಶ್ ಸಾಹ್ನಿ ಅವರನ್ನು ಮಹಾಘಟಬಂಧನ ಮೈತ್ರಿಕೂಟದ ಉಪಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತಾದರೂ ಗೌರಾ ಗ್ರಾಮದಲ್ಲಿ ಸ್ಪರ್ಧಿಸಿದ್ದ ಅವರ ಸೋದರ ಸಂತೋಷ ಸಾಹ್ನಿ ಕಣದಲ್ಲಿದ್ದ 12 ಅಭ್ಯರ್ಥಿಗಳ ಪೈಕಿ ಎಂಟನೇ ಸ್ಥಾನಕ್ಕೆ ಕುಸಿದಿದ್ದಾರೆ.

ಲಾರಿಯಾ,‌ ಕೇಸರಿಯಾ, ಸಿಕ್ತಿ ಮತ್ತು ಕಥಿಹಾರ್ ಸೇರಿದಂತೆ 12 ಕ್ಷೇತ್ರಗಳಲ್ಲಿ ವಿಐಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News