×
Ad

ಬಿಹಾರ| ದಲಿತ ಮಹಿಳೆಗೆ ಸಾರ್ವಜನಿಕವಾಗಿ ಥಳಿಸಿದ ಪೊಲೀಸ್‌ ಅಧಿಕಾರಿ: ವೀಡಿಯೋ ವೈರಲ್‌

Update: 2024-01-01 16:07 IST

Photo: indiatoday.in

ಪಾಟ್ನಾ: ಬಿಹಾರದ ಸೀತಾಮರ್ಹಿ ಎಂಬಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ದಲಿತ ಮಹಿಳೆಯೊಬ್ಬಳಿಗೆ ಸಾರ್ವಜನಿಕ ಸ್ಥಳದಲ್ಲಿ ಥಳಿಸಿದ ವೀಡಿಯೋ ವೈರಲ್‌ ಆಗಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್‌ ಕಿಶೋರ್‌ ಸಿಂಗ್‌ ಎಂಬ ಪೊಲೀಸ್‌ ಅಧಿಕಾರಿ ಕೆಲ ಸಾರ್ವಜನಿಕರು ಸುತ್ತಲಿರುವಾಗಲೇ ಮಹಿಳೆಗೆ ಕೋಲಿನಿಂದ ಬಾರಿಸುವುದು ಕಾಣಿಸುತ್ತದೆ.

ಸಂತ್ರಸ್ತೆ ಹಾಗೂ ಇನ್ನೊಬ್ಬ ಮಹಿಳೆ ಸಾರ್ವಜನಿಕ ಸ್ಥಳದಲ್ಲಿ ಜಗಳವಾಡುತ್ತಿರುವುದನ್ನು ಗಮನಿಸಿದ ನಂತರ ಪೊಲೀಸ್‌ ಅಧಿಕಾರಿಯು ದಲಿತ ಮಹಿಳೆಗೆ ಥಳಿಸಿದ್ದರೆನ್ನಲಾಗಿದೆ.

ತನಿಖೆ ನಡೆಸಲಾಗುವುದು ಹಾಗೂ ಅಧಿಕಾರಿ ತಪ್ಪಿತಸ್ಥರೆಂದು ತಿಳಿದು ಬಂದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಸೀತಾಮರ್ಹಿ ಎಸ್‌ಪಿ ಮನೋಜ್‌ ಕುಮಾರ್‌ ತಿವಾರಿ ಹೇಳಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಝಾದ್‌ ಪೂನಾವಾಲ, “ಬಿಹಾರದಲ್ಲಿ ಅಪರಾಧಿಗಳು ಸ್ವಚ್ಛಂದವಾಗಿ ತಿರುಗಾಡಿಕೊಂಡಿದ್ದರೆ ಸಾರ್ಜನಿಕರಿಗೆ ಲಾಠಿ ಚಾರ್ಜ್‌ ಮಾಡಲಾಗುತ್ತಿದೆ,”ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News