×
Ad

ಬಜೆಟ್ 2026 | ಕೇಂದ್ರ ಬಜೆಟ್‌ ಸಂಪೂರ್ಣ ನೀರಸ: ಕಾಂಗ್ರೆಸ್ ವಾಗ್ದಾಳಿ

Update: 2026-02-01 15:30 IST

 ಜೈರಾಮ್ ರಮೇಶ್ | Photo Credit : PTI

ಹೊಸದಿಲ್ಲಿ, ಫೆ. 1: 2026–27ನೇ ಸಾಲಿನ ಕೇಂದ್ರ ಬಜೆಟ್‌ ಸಂಪೂರ್ಣವಾಗಿ ನೀರಸವಾಗಿದೆ ಎಂದು ಕಾಂಗ್ರೆಸ್ ಪಕ್ಷ ರವಿವಾರ ವಾಗ್ದಾಳಿ ನಡೆಸಿದೆ. ಬಜೆಟ್‌ ಸುತ್ತ ಸೃಷ್ಟಿಸಲಾದ ಪ್ರಚಾರಕ್ಕೆ ತಕ್ಕುದಾಗಿರದೇ ನಿರಾಶೆ ಮೂಡಿಸಿದೆ ಎಂದು ಪಕ್ಷವು ಹೇಳಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಒಂಭತ್ತನೇ ಬಾರಿಗೆ ಬಜೆಟ್‌ ಮಂಡಿಸಿದ್ದು, ಪಾರದರ್ಶಕವಾಗಿರಲಿಲ್ಲ ಎಂದು ಕಾಂಗ್ರೆಸ್ ಸಂವಹನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಪ್ರಮುಖ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆ ಕುರಿತ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ ಎಂದು ಅವರು ಹೇಳಿದ್ದಾರೆ.

‘ಬಜೆಟ್‌ ದಾಖಲೆಗಳನ್ನು ವಿವರವಾಗಿ ಪರಿಶೀಲಿಸಬೇಕಾದ ಅಗತ್ಯವಿದ್ದರೂ, ಸುಮಾರು 90 ನಿಮಿಷಗಳ ಭಾಷಣದ ಬಳಿಕ ಈ ಬಜೆಟ್‌ ಪ್ರಚಾರ ಮಾಡಿದ್ದಕ್ಕಿಂತ ಕಡಿಮೆಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇದು ಸಂಪೂರ್ಣವಾಗಿ ನೀರಸವಾಗಿದೆ’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿತ್ತ ಸಚಿವೆ ತಮ್ಮ ಭಾಷಣದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಮೀಸಲಿಟ್ಟಿದ್ದ 11.2 ಲಕ್ಷ ಕೋಟಿ ರೂ.ವಿನಿಂದ 12.2 ಲಕ್ಷ ಕೋಟಿಗೆ ರೂ.ಗೆ ಬಂಡವಾಳ ವೆಚ್ಚದ ಗುರಿಯನ್ನು ಹೆಚ್ಚಿಸುವುದಾಗಿ ಘೋಷಿಸಿದರು. ದ್ವಿತೀಯ ಹಾಗೂ ತೃತೀಯ ಹಂತದ ನಗರಗಳನ್ನು ಒಳಗೊಂಡಂತೆ ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಪ್ರಕಟಿಸಿದರು.

ಜಾಗತಿಕ ಆರ್ಥಿಕ ಅನಿಶ್ಚಿತತೆ, ವ್ಯಾಪಾರ ಘರ್ಷಣೆಗಳು, ಅಮೆರಿಕದ ಸುಂಕ ನೀತಿಗಳು ಹಾಗೂ ರಫ್ತು ನಿಧಾನಗತಿಯ ಹಿನ್ನೆಲೆಯಲ್ಲಿಯೇ ಈ ಬಜೆಟ್‌ ಮಂಡನೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News