×
Ad

ವಿಕಸಿತ್‌ ಭಾರತದ ಅಡಿಪಾಯ ಬಲಪಡಿಸುವ ಬಜೆಟ್: ಪ್ರಧಾನಿ ಮೋದಿ

‘ಐತಿಹಾಸಿಕ’ ಬಜೆಟ್ ಎಂದ ಪ್ರಧಾನಿ

Update: 2026-02-01 14:36 IST

ಪ್ರಧಾನಿ ನರೇಂದ್ರ ಮೋದಿ | Photo : NDTV

ಹೊಸದಿಲ್ಲಿ: 2026–27ನೇ ಸಾಲಿನ ಕೇಂದ್ರ ಬಜೆಟ್‌, ವಿಕಸಿತ್‌ ಭಾರತ ನಿರ್ಮಾಣಕ್ಕೆ ದೃಢವಾದ ಅಡಿಪಾಯ ಹಾಕುವ ಬಜೆಟ್ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಜೆಟ್‌ ಅನ್ನು ‘ಐತಿಹಾಸಿಕ’ವೆಂದು ವರ್ಣಿಸಿದ ಅವರು, ಇದು ದೇಶದ ಇಂದಿನ ಕನಸುಗಳನ್ನು ಈಡೇರಿಸುವ ಜೊತೆಗೆ ಭವಿಷ್ಯದ ಅಭಿವೃದ್ಧಿಗೆ ದಿಕ್ಕು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಬಜೆಟ್‌ ‘ನಾರಿ ಶಕ್ತಿ’ಯ ಪ್ರತಿಬಿಂಬವಾಗಿದ್ದು, ಸತತ ಒಂಭತ್ತನೇ ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ಅವರನ್ನು ಪ್ರಧಾನಿ ಶ್ಲಾಘಿಸಿದರು. ಮಹಿಳಾ ಸಬಲೀಕರಣ ಹಾಗೂ ಯುವಜನತೆಗೆ ಉತ್ತೇಜನ ನೀಡುವ ಅನೇಕ ಉಪಕ್ರಮಗಳನ್ನು ಬಜೆಟ್ ಒಳಗೊಂಡಿದೆ ಎಂದರು.

ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ಭಾರತ ಸುಧಾರಣೆಯ ವೇಗದ ಹಾದಿಯಲ್ಲಿ ಸಾಗುತ್ತಿದ್ದು, ಈ ಬಜೆಟ್ ಆ ವೇಗವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಹೇಳಿದರು. ಪ್ರತಿಭಾನ್ವಿತ ಯುವಕರಿಗೆ ಅನುಕೂಲಕರ ವಾತಾವರಣ ಸೃಷ್ಟಿಸುವ ಸುಧಾರಣೆಗಳನ್ನೂ ಈ ಬಜೆಟ್ ಒಳಗೊಂಡಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News