ಬಜೆಟ್ 2026 ಮುಖ್ಯಾಂಶಗಳು | ನಗರ ಮೂಲಸೌಕರ್ಯ, ಬಯೋಫಾರ್ಮ, ರೈಲ್ವೇ ಕಾರಿಡಾರ್ ಗಳ ಘೋಷಣೆ; ಇಲ್ಲಿದೆ ವಿವರ...
Photo credit: PTI
ಕೇಂದ್ರ ಸರ್ಕಾರ ತನ್ನ ಕರ್ತವ್ಯಗಳ ಜೊತೆಗೆ ಕೆಲವು ಪ್ರಮುಖ ಯೋಜನೆಗಳನ್ನು ಘೋಷಿಸಿದೆ. ಅವುಗಳ ವಿವರ ಹೀಗಿದೆ.
ಕೇಂದ್ರ ಸರ್ಕಾರದ ಕರ್ತವ್ಯಗಳು: ಕೇಂದ್ರ ಸರ್ಕಾರ ಬಜೆಟ್ನಲ್ಲಿ ಮೂರು ಕರ್ತವ್ಯಗಳನ್ನು ಘೋಷಿಸಿದೆ. ಅವುಗಳೆಂದರೆ, ಅಸ್ಥಿರ ಜಾಗತಿಕ ಚಲನಶೀಲತೆಗೆ ಸಹಿಷ್ಣುತೆ ಬೆಳೆಸಿಕೊಂಡು ಆರ್ಥಿಕ ಪ್ರಗತಿಯನ್ನು ಸುಸ್ಥಿರಗೊಳಿಸುವುದು ಮತ್ತು ವೇಗಗೊಳಿಸುವುದು. ಎರಡನೆಯದು, ಭಾರತದ ಸಾಧನೆಯ ಪಥದಲ್ಲಿ ಜನರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಮೂಲಕ ಅವರ ಆಶೋತ್ತರಗಳನ್ನು ಪೂರೈಸುವುದು. ಮೂರನೆಯದು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್'! ಪ್ರತಿ ಕುಟುಂಬಗಳು, ಸಮುದಾಯಗಳು, ಪ್ರದೇಶಗಳಿಗೆ ಸಂಪನ್ಮೂಲಗಳು, ಸೌಲಭ್ಯಗಳಿಗೆ ಅವಕಾಶಗಳನ್ನು ನೀಡುವುದನ್ನು ಖಚಿತಪಡಿಸುವುದು.
ಉಳಿದಂತೆ ಈ ಕೆಳಗಿನ ಪ್ರಮುಖ ವಿಚಾರಗಳನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ.
📌 ರೈಲ್ವೇ ಕಾರಿಡಾರ್ ಘೋಷಣೆ: ದೇಶಾದ್ಯಂತ ಏಳು ಹೈಸ್ಪೀಡ್ ರೈಲು ಕಾರಿಡಾರ್ಗಳನ್ನು ಅಭಿವೃದ್ಧಿಪಡಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದಾರೆ. ಅವುಗಳೆಂದರೆ ಮುಂಬೈ-ಪುಣೆ, ಪುಣೆ-ಹೈದರಾಬಾದ್, ಹೈದರಾಬಾದ್-ಬೆಂಗಳೂರು, ಹೈದರಾಬಾದ್-ಚೆನ್ನೈ, ಚೆನ್ನೈ-ಬೆಂಗಳೂರು, ದೆಹಲಿ-ವಾರಣಾಸಿ ಮತ್ತು ವಾರಣಾಸಿ-ಸಿಲಿಗುರಿ.
📌 ಬಯೋಫಾರ್ಮಾ ವಲಯಕ್ಕೆ ನೆರವು: ಭಾರತವನ್ನು ಜೈವಿಕ ಔಷಧಿಗಳ ಉತ್ಪಾದನಾ ಕೇಂದ್ರವಾಗಲು ಉತ್ತೇಜಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರವಿವಾರ ಬಯೋಪಾರ್ಮಾ ಶಕ್ತಿ ಮಿಷನ್ ಘೋಷಿಸಿದ್ದರು. ಮುಂದಿನ ಐದು ವರ್ಷಗಳಲ್ಲಿ 10,000 ಕೋಟಿ ರೂ.ಗಳ ವೆಚ್ಚವನ್ನು ನಿಗದಿಪಡಿಸಲಾಗಿದೆ.
📌ಎರಡನೇ- ಮೂರನೇ ದರ್ಜೆ ನಗರಗಳ ಅಭಿವೃದ್ಧಿ: ದರ್ಜೆ 2 ಮತ್ತು ದರ್ಜೆ 3 ನಗರಗಳನ್ನು ಕೇಂದ್ರೀಕರಿಸಿ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ಪ್ರತಿ ಸಿಇಆರ್ಗೆ 5000 ಕೋಟಿ ರೂ.ಗಳ ಹಂಚಿಕೆಯೊಂದಿಗೆ ನಗರದ ಆರ್ಥಿಕ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವರು ಬಜೆಟ್ ನಲ್ಲಿ ಘೋಷಿಸಿದ್ದಾರೆ.
📌 ವಿಶೇಷವಾಗಿ ವಲಯವಾರು ಯೋಜನೆ: ಆರು ವಲಯಕ್ಕೆ ಬೆಂಬಲ ನೀಡುವುದಾಗಿ ಬಜೆಟ್ ನಲ್ಲಿ ತಿಳಿಸಲಾಗಿದೆ. ಅದರಲ್ಲಿ ಏಳು ಕಾರ್ಯತಂತ್ರ ಮತ್ತು ಮುನ್ನೆಲೆಯ ವಲಯದಲ್ಲಿ ಉತ್ಪಾದನೆಯನ್ನು ಏರಿಸುವುದು ಸೇರಿದೆ. MSME ಗಳಿಗೆ ಉತ್ತೇಜನ, ಮೂಲಸೌಕರ್ಯಕ್ಕೆ ಉತ್ತೇಜನ, ದೀರ್ಘಕಾಲೀನ ಸ್ಥಿರತೆ ಮತ್ತು ಭದ್ರತೆಯನ್ನು ಖಚಿತಪಡಿಸುವುದು ಸೇರಿದೆ.
📌 ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ ಯೋಜನೆ: ಯೋಜನೆಯ ಮೂಲಕ ಖಾದಿ ಕೈಮಗ್ಗವನ್ನು ಬಲಪಡಿಸಲಾಗುವುದು. “ಸವಾಲಿನ ಉಪಕ್ರಮದಲ್ಲಿ ಮೆಗಾ ಜವಳಿ ಪಾರ್ಕ್ಗಳನ್ನು ಸ್ಥಾಪಿಸಲು ಪ್ರಸ್ತಾಪಿಸುತ್ತೇನೆ. ಖಾದಿ ಮತ್ತು ಕೈಮಗ್ಗವನ್ನು ಬಲಪಡಿಸಲು ಹೊಸ ಯೋಜನೆ ಪ್ರಸ್ತಾಪಿಸುತ್ತೇನೆ” ಎಂದು ಹಣಕಾಸು ಸಚಿವರು ಹೇಳಿದ್ದಾರೆ.
📌 ರಾಷ್ಟ್ರೀಯ ಫೈಬರ್ ಯೋಜನೆ: ಹತ್ತಿ, ಸೆಣಬು, ಉಣ್ಣೆ, ರೇಷ್ಮೆ ಮತ್ತು ತೆಂಗಿನ ನಾರಿನಂತಹ ನೈಸರ್ಗಿಕ ಫೈಬರ್ಗಳಲ್ಲಿ ಸ್ವಾವಲಂಬನೆ ಸಾಧಿಸಲು ರಾಷ್ಟ್ರೀಯ ಫೈಬರ್ ಯೋಜನೆಯನ್ನು ಉದ್ದೇಶಿಸಲಾಗಿದೆ. ಈ ಯೋಜನೆಯಲ್ಲಿ ಪೂರೈಕೆ ಸರಪಳಿಯನ್ನು ಬಲಪಡಿಸುತ್ತದೆ, ಗುಣಮಟ್ಟ ಮತ್ತು ಮಾನದಂಡಗಳನ್ನು ಸುಧಾರಿಸುತ್ತದೆ. ಫೈಬರ್ ಕೃಷಿಯಲ್ಲಿ ತೊಡಗಿರುವ ಉತ್ಪಾದಕರನ್ನು ಬೆಂಬಲಿಸಲಿದೆ.
📌 MSME ಗಳಿಗೆ ನೆರವು: ಸಣ್ಣ ಮತ್ತು ಮಧ್ಯಮ ಉದ್ಯಮಗಳು (SME)ಗಳಿಗೆ ಮತ್ತು ಉತ್ಪಾದನಾ ವಲಯಗಳಿಗೆ ಪ್ರಮುಖ ಪ್ರೋತ್ಸಾಹವನ್ನು ಘೋಷಿಸಲಾಗಿದೆ. ಇವುಗಳಲ್ಲಿ ಅತ್ಯುತ್ತಮ ಸಾಧನೆಗೆ 10,000 ಕೋಟಿ ರೂ. ನಿಧಿಯನ್ನು ಮತ್ತು ಸ್ವಾವಲಂಬಿ ಭಾರತ ನಿಧಿಗೆ 4000 ಕೋಟಿ ರೂ.ಗಳನ್ನು ಪ್ರಸ್ತಾಪಿಸಲಾಗಿದೆ.