×
Ad

ಕೇವಲ ಪತ್ರಗಳ ಆಧಾರದಲ್ಲಿ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸುವಂತಿಲ್ಲ: ಸುಪ್ರೀಂ ಕೋರ್ಟ್

Update: 2024-09-27 15:27 IST

ಹೊಸದಿಲ್ಲಿ: ಕೇವಲ ಪತ್ರಗಳ ಆಧಾರದ ಮೇಲೆ ಮತ್ತು ಸೂಕ್ತ ಕಾರಣಗಳನ್ನು ಉಲ್ಲೇಖಿಸದೆ ಸಿಬಿಐ ತನಿಖೆಗೆ ಆದೇಶಿಸಲು ಹೈಕೋರ್ಟ್ ತನ್ನ ಅಧಿಕಾರವನ್ನು ಚಲಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರ ಪೀಠವು ಕಲ್ಕತ್ತಾ ಹೈಕೋರ್ಟ್ನ ಎ.9 ಮತ್ತು 19ರ ಆದೇಶಗಳನ್ನು ರದ್ದುಗೊಳಿಸಿದೆ. ಗೂರ್ಖಾ ಪ್ರಾದೇಶಿಕ ಆಡಳಿತದಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಮಹತ್ವದ ಆದೇಶವನ್ನು ಸುಪ್ರೀಂಕೋರ್ಟ್ ಹೇಳಿದೆ.

ಸಂವಿಧಾನದ 226ನೇ ವಿಧಿ ಪ್ರಕಾರ ಹೈಕೋರ್ಟ್ ಅಧಿಕಾರವನ್ನು ಚಲಾಯಿಸುವಾಗ ಸಿಬಿಐಗೆ ತನಿಖೆಯನ್ನು ವಹಿಸುವ ಅಧಿಕಾರವನ್ನು ಹೊಂದಿದೆ, ಆದ್ರೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿ ರಾಜ್ಯ ಪೊಲೀಸರ ತನಿಖೆ ನ್ಯಾಯಯುತವಾಗಿಲ್ಲ ಎಂದಾಗ ಮಾತ್ರ ಸಿಬಿಐ ತನಿಖೆಗೆ ವಹಿಸಬೇಕೆಂದು ನ್ಯಾಯಪೀಠವು ಹೇಳಿದೆ.

ಅಪರೂಪದ ಪ್ರಕರಣಗಳನ್ನು ಮಾತ್ರ ಹೈಕೋರ್ಟ್ ಸಿಬಿಐಗೆ ತನಿಖೆಗೆ ಆದೇಶಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News