×
Ad

ಒಡಿಶಾ | ಲಂಚಕ್ಕೆ ಬೇಡಿಕೆ : ED ಉಪ ನಿರ್ದೇಶಕನನ್ನು ಬಂಧಿಸಿದ ಸಿಬಿಐ

Update: 2025-05-30 12:41 IST

ಭುವನೇಶ್ವರ : ಒಡಿಶಾದಲ್ಲಿ ಲಂಚ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಚಿಂತನ್ ರಘುವಂಶಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ .

ಭುವನೇಶ್ವರ ಮೂಲದ ಗಣಿ ಉದ್ಯಮಿಯೋರ್ವರ ಬಳಿ 20 ಲಕ್ಷ ರೂ. ಲಂಚ ನೀಡುವಂತೆ ಚಿಂತನ್ ರಘುವಂಶಿ ಬೇಡಿಕೆ ಇಟ್ಟಿದ್ದರು. ಈ ಕುರಿತ ಖಚಿತ ಮಾಹಿತಿಯ ಮೇರೆಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಪ್ರಕರಣದಲ್ಲಿ 2013ರ ಬ್ಯಾಚ್‌ನ ಐಆರ್‌ಎಸ್‌ ಅಧಿಕಾರಿಯಾಗಿರುವ ರಘುವಂಶಿ ಅವರನ್ನು ವಿಚಾರಣೆ ಬಳಿಕ ಬಂಧಿಸಿರುವುದಾಗಿ ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News