×
Ad

ನಾಳೆ ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ ಸಾಧ್ಯತೆ

Update: 2025-05-11 21:34 IST

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯ 10ನೇ ಹಾಗೂ 12ನೇ ತರಗತಿಗಳಪರೀಕ್ಷಾ ಫಲಿತಾಂಶಗಳು ಸೋಮವಾರ ಪ್ರಕಟವಾಗುವ ನಿರೀಕ್ಷೆಯಿದೆ. ಪರೀಕ್ಷಾ ಫಲಿತಾಂಶ ಘೋಷಣೆಯಾದ ಬಳಿಕ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು cbse.gov.in, cbseresults.nic.in ಹಾಗೂ results.cbse.nic.in ಜಾಲತಾಣಗಳಲ್ಲಿ ವೀಕ್ಷಿಸಬಹುದಾಗಿದೆ.

2024-25ರ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಮೇಲಿನ ಕಲಿಕಾ ಒತ್ತಡ ಹಾಗೂ ಅನಾರೋಗ್ಯಕರ ಸ್ಪರ್ಧಾತ್ಮಕತೆಯನ್ನು ಕಡಿಮೆಗೊಳಿಸಲು ‘ರಿಲೇಟಿವ್ ಗ್ರೇಡಿಂಗ್’ ಎಂಬ ಪದ್ಧತಿಯನ್ನು ಜಾರಿಗೊಳಿಸಿದೆ.

ಈ ಪದ್ಧತಿಯ ಪ್ರಕಾರ ವಿದ್ಯಾರ್ಥಿಗಳಿಗೆ ಅವರು ಪಡೆದ ಅಂಕಗನ್ನು ಆಧರಿಸಿ ನಿಗದಿತ ಅಂಕ ವ್ಯಾಪ್ತಿ (ಮಾರ್ಕ್ ರೇಂಜ್) ಗಳನ್ನು ನೀಡಲಾಗುತ್ತದೆ. ( ಉದಾ: 91-100ರವರೆಗಿನ ಅಂಕಗಳಿಗೆ ಎ1, 81-90ರವರೆಗಿನ ಅಂಕಗಳಿಗೆ ಎ2).

ಈ ವರ್ಷ 10 ಹಾಗೂ 12ನೇ ತರಗತಿಯ ಸಿಬಿಎಸ್‌ಇ ಪರೀಕ್ಷೆಗಳಿಗೆ 42 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪರೀಕ್ಷೆಗಳು ಫೆಬ್ರವರಿ 15ರಿಂದ ಎಪ್ರಿಲ್ 4ರವರೆಗೆ ನಡೆದಿದ್ದವು. 10ನೇ ತರಗತಿ ಪರೀಕ್ಷೆಗಳು ಮಾರ್ಚ್ 18ರಂದು ಕೊನೆಗೊಂಡಿದ್ದರೆ, 12ನೇ ತರಗತಿ ಪರೀಕ್ಷೆಗಳು ಎಪ್ರಿಲ್ 4ರಂದು ಮುಕ್ತಾಯವಾಗಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News