×
Ad

52 ಔಷಧ ಮಾದರಿಗಳನ್ನು ಪ್ರಮಾಣಿತ ಗುಣಮಟ್ಟದ್ದಲ್ಲ ಎಂದು ಪತ್ತೆ ಹಚ್ಚಿದ ಕೇಂದ್ರೀಯ ಔಷಧ ಪ್ರಯೋಗಾಲಯ

Update: 2025-10-24 12:24 IST

ಸಾಂದರ್ಭಿಕ ಚಿತ್ರ (AI)

ಹೊಸದಿಲ್ಲಿ : ಕೇಂದ್ರೀಯ ಔಷಧ ಪ್ರಯೋಗಾಲಯಗಳು(ಸೆಂಟ್ರಲ್ ಡ್ರಗ್ಸ್ ಲ್ಯಾಬೋರೇಟರೀಸ್) 52 ಔಷಧ ಮಾದರಿಗಳನ್ನು 'ಪ್ರಮಾಣಿತ ಗುಣಮಟ್ಟದ್ದಲ್ಲ' ಎಂದು ಪತ್ತೆ ಹಚ್ಚಿವೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಪ್ರಮಾಣಿತ ಗುಣಮಟ್ಟವಲ್ಲದ (NSQ) ಮತ್ತು ನಕಲಿ ಔಷಧಿಗಳ ಪಟ್ಟಿಯನ್ನು CDSCO ಪೋರ್ಟಲ್‌ನಲ್ಲಿ ಮಾಸಿಕವಾಗಿ ಪ್ರಕಟಿಸಲಾಗುತ್ತದೆ.

ಸೆಪ್ಟೆಂಬರ್ 2025ರಲ್ಲಿ ಕೇಂದ್ರ ಔಷಧ ಪ್ರಯೋಗಾಲಯಗಳು 52 ಔಷಧ ಮಾದರಿಗಳನ್ನು 'ಪ್ರಮಾಣಿತ ಗುಣಮಟ್ಟದ್ದಲ್ಲ ಎಂದು ಗುರುತಿಸಿವೆ ಮತ್ತು ರಾಜ್ಯ ಔಷಧ ಪರೀಕ್ಷಾ ಪ್ರಯೋಗಾಲಯಗಳು 60 ಔಷಧ ಮಾದರಿಗಳು ಪ್ರಮಾಣಿತ ಗುಣಮಟ್ಟದ್ದಾಗಿಲ್ಲ ಎಂದು ಗುರುತಿಸಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News