×
Ad

ದಿಲ್ಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ | ಸಂಸತ್ತಿನ ಆವರಣದಲ್ಲಿ ಚಂದ್ರಶೇಖರ್ ಆಝಾದ್ ಪ್ರತಿಭಟನೆ

Update: 2025-12-17 13:12 IST

Screengrab:X/@PTI_News

ಹೊಸದಿಲ್ಲಿ: ದಿಲ್ಲಿಯಲ್ಲಿ ವಾಯು ಮಾಲಿನ್ಯದ ಹೆಚ್ಚಳವನ್ನು ವಿರೋಧಿಸಿ ಸಂಸತ್ತಿನ ಆವರಣದಲ್ಲಿ ಸಂಸದ ಚಂದ್ರಶೇಖರ್ ಆಝಾದ್ ಪ್ರತಿಭಟನೆ ನಡೆಸಿದ್ದಾರೆ.

ಸಂಸತ್ತಿನ ಆವರಣದಲ್ಲಿ "ಗಾಳಿ ವಿಷಕಾರಿಯಾಗಿದೆ. ಸರಕಾರ ನಾಪತ್ತೆಯಾಗಿದೆ" ಎಂಬ ಬ್ಯಾನರ್ ಹಿಡಿದು ಸಂಸದ ಚಂದ್ರಶೇಖರ್ ಆಝಾದ್ ಪ್ರತಿಭಟನೆ ನಡೆಸಿದ್ದಾರೆ.

“ವಾಯು ಗುಣಮಟ್ಟ ಸೂಚ್ಯಂಕ(AQI) 450ಕ್ಕಿಂತ ಹೆಚ್ಚಾದರೂ ದಿಲ್ಲಿ ಸರಕಾರಕ್ಕೆ ಇದು ಏಕೆ ಗೋಚರಿಸುತ್ತಿಲ್ಲ? ದಿಲ್ಲಿಯ ಜನರು ಶುದ್ಧ ಗಾಳಿಗೆ ಅರ್ಹರು. ಗಾಳಿ ವಿಷಕಾರಿಯಾಗಿದೆ. ಆದರೆ ಸರಕಾರ ಏನನ್ನೂ ಮಾಡುತ್ತಿಲ್ಲ. ಅವರು ಈ ವಿಷಯವನ್ನು ಮರೆಮಾಚುತ್ತಿದ್ದಾರೆ” ಎಂದು ಚಂದ್ರಶೇಖರ್ ಆಝಾದ್ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News