ಕೋ-ಆಪರೇಟಿವ್ ಬ್ಯಾಂಕ್ ‘ವಂಚನೆ’ ಪ್ರಕರಣ : ಅಂಡಮಾನ್‌ನ ಮಾಜಿ ಸಂಸದ, ಇತರ ಇಬ್ಬರ ಬಂಧನ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಸೆ. 17: ಕೋ-ಆಪರೇಟಿವ್ ಬ್ಯಾಂಕ್ ಸಾಲ ವಂಚನೆ ಆರೋಪಕ್ಕೆ ನಂಟು ಹೊಂದಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅಂಡಮಾನ್ ಹಾಗೂ ನಿಕೋಬಾರ್‌ನ ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ಕುಲದೀಪ್ ರಾಯ್ ಶರ್ಮಾ ಹಾಗೂ ಇತರ ಇಬ್ಬರನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಹಣ ಅಕ್ರಮ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಜಾರಿ ನಿರ್ದೇಶನಾಲಯ ನಡೆಸಿದ ಮೊದಲ ಬಂಧನ ಇದಾಗಿದೆ. ಶರ್ಮಾ ಅಂಡಮಾನ್ ನಿಕೋಬಾರ್ ಸ್ಟೇಟ್ ಕೊ-ಆಪರೇಟಿವ್ ಬ್ಯಾಂಕ್ (ಎಎನ್‌ಎಸ್‌ಸಿಬಿ) ಮಾಜಿ ಅಧ್ಯಕ್ಷರಾಗಿದ್ದಾರೆ.
ಇವರಲ್ಲದೆ ಬ್ಯಾಂಕ್‌ನ ಆಡಳಿತ ನಿರ್ದೇಶಕ ಕೆ. ಮರುಗನ್ ಹಾಗೂ ಬ್ಯಾಂಕ್‌ನ ಸಾಲ ಅಧಿಕಾರಿ ಕಲೈವಾನನ್ ಅವರನ್ನು ಬಂಧಿಸಲಾಗಿದೆ. ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯ ಮೂವರನ್ನು 8 ದಿನಗಳ ಕಾಲ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯದ ತನಿಖೆ ಎಎನ್‌ಎಸ್‌ಸಿಬಿಯಲ್ಲಿ ವಂಚನೆಯ ಆರೋಪಕ್ಕೆ ಸಂಬಂಧಿಸಿದೆ.