×
Ad

ಐಸಿಐಸಿಐ ಬ್ಯಾಂಕ್‌ ನ ಕನಿಷ್ಠ 17 ಸಾವಿರ ಬಳಕೆದಾರರ ಕ್ರೆಡಿಟ್ ಕಾರ್ಡ್ ದತ್ತಾಂಶ ಸೋರಿಕೆ | ಕಾರ್ಡ್ ಬ್ಲಾಕ್ ಮಾಡಿದ ಬ್ಯಾಂಕ್

Update: 2024-04-25 21:52 IST

CICI Bank | PC : NDTV  

ಹೊಸದಿಲ್ಲಿ : ಐಸಿಐಸಿಐ ಬ್ಯಾಂಕ್‌ ನ ಕನಿಷ್ಠ 17 ಸಾವಿರ ನೂತನ ಗ್ರಾಹಕರ ಕೆಡಿಟ್ ಕಾರ್ಡ್ ದತ್ತಾಂಶಗಳು ಸೋರಿಕೆಯಾಗಿದ್ದು, ‘‘ತಪ್ಪು ಬಳಕೆದಾರರ ಕೈಸೇರಿವೆ’’ ಎಂದು ಬ್ಯಾಂಕ್ ಗುರುವಾರ ತಿಳಿಸಿದೆ. ದತ್ತಾಂಶ ಸೋರಿಕೆಯಾದ ಕ್ರೆಡಿಟ್ ಕಾರ್ಡ್ ಗಳನ್ನು ತಾನು ನಿಷ್ಕ್ರಿಯಗೊಳಿಸಿದ್ದು, ಗ್ರಾಹಕರಿಗೆ ನೂತನ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸುವುದಾಗಿ ತಿಳಿಸಿದೆ.

ಐಸಿಐಸಿಐ ಬ್ಯಾಂಕ್‌ ನ ಕ್ರೆಡಿಟ್ ಕಾರ್ಡ್ ವಿವರಗಳನ್ನು ಸೋರಿಕೆ ಮಾಡಿದ ಬ್ಯಾಂಕ್‌ ನ ಐಮೊಬೈಲ್ ಪೇ ಆ್ಯಪ್ನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕರು ಕಳವಳ ವ್ಯಕ್ತಪಡಿಸಿದ ಈ ವಿಷಯವು ಬೆಳಕಿಗೆ ಬಂದಿತು. ಐಮೊಬೈಲ್ ಆ್ಯಪ್ ಮೂಲಕ ಸುಮಾರು 17 ಸಾವಿರ ಕ್ರೆಡಿಟ್ ಕಾರ್ಡ್ ಗಳ ಸಂಪೂರ್ಣ ನಂಬರ್ ಹಾಗೂ ಕಾರ್ಡ್ ದೃಢೀಕರಣ ಮೌಲ್ಯ (ಸಿವಿವಿ) ಸೇರಿದಂತೆ ಸಮಗ್ರ ವಿವರಗಳು ಸೋರಿಕೆಯಾಗಿದೆಯೆಂದು ವಿತ್ತೀಯ ಸಂಬಂಧಿ ವೇದಿಕೆಯಾದ ಫಿನೊ ತಿಳಿಸಿದೆ.

ಕಳೆದ ಕೆಲವು ದಿನಗಳಲ್ಲಿ ವಿತರಿಸಲಾದ 17 ಸಾವಿರ ನೂತನ ಕ್ರೆಡಿಟ್ ಕಾರ್ಡ್ ಗಳ ವಿವರಗಳು ನಮ್ಮ ಡಿಜಿಟಲ್ ವಾಹಿನಿಗಳ ಮೂಲಕ ಪ್ರಮಾದವಶಾತ್, ತಪ್ಪು ಬಳಕೆದಾರರನ್ನು ತಲುಪಿದೆ ಎಂದು ಐಸಿಐಸಿಐ ಬ್ಯಾಂಕ್‌ ನ ವಕ್ತಾರರು ತಿಳಿಸಿದ್ದಾರೆ.

ಆದರೆ ಈವರೆಗೆ ಈ ಸೆಟ್ ನ ಯಾವುದೇ ಕ್ರೆಡಿಟ್ ಕಾರ್ಡ್ ದುರ್ಬಳಕೆಯಾದ ಬಗ್ಗೆ ಯಾವುದೇ ಪ್ರಕರಣ ಈವರೆಗೆ ನಮಗೆ ವರದಿಯಾಗಿಲ್ಲ. ಆದರೂ, ಅಂತಹ ಯಾವುದೇ ಆರ್ಥಿಕ ನಷ್ಟವುಂಟಾದಲ್ಲಿ ಐಸಿಐಸಿಐ ಬ್ಯಾಂಕ್ ಸೂಕ್ತವಾದ ಪರಿಹಾರವನ್ನು ನೀಡಲಿದೆ ಎಂದು ಎಂದು ವಕ್ತಾರರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News