ಸಿಯುಇಟಿ-ಯುಜಿ ಫಲಿತಾಂಶ ಪ್ರಕಟ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಸಾಮಾನ್ಯ ವಿವಿ ಪ್ರವೇಶ ಪರೀಕ್ಷೆ (ಸಿಯುಇಟಿ)-ಯುಜಿ ಫಲಿತಾಂಶಗಳನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ರವಿವಾರ ಪ್ರಕಟಿಸಿದೆ.
ಇದರೊಂದಿಗೆ ಈ ವರ್ಷ ವಿಳಂಬಗೊಂಡಿರುವ ಸ್ನಾತಕೋತ್ತರ ಪದವಿ ಪ್ರಕ್ರಿಯೆ ಪ್ರವೇಶಕ್ಕೆೆ ಸುಗಮ ಹಾದಿ ಕಲ್ಪಿಸಿದಂತಾಗಿದೆ.
ಸಿಯುಇಟಿ-ಯುಜಿ 2024ರ ತಾತ್ಕಾಲಿಕ ಉತ್ತರ ಕೀಗಳನ್ನು ಎನ್‌ಟಿಎ ಜುಲೈ 7ರಂದು ಬಿಡುಗಡೆಗೊಳಿಸಿತ್ತು. ವಿವಿ ಪ್ರಕಟಿಸಿದ ತಾತ್ಕಾಲಿಕ ಉತ್ತರ ಕೀಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸುಮಾರು 1 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳಿಗೆ ಜುಲೈ 19ರಂದು ಮರುಪರೀಕ್ಷೆಯನ್ನು ನಡೆಸಲಾಗಿತ್ತು.
ಸಿಯುಇಟಿ-ಯುಜಿ ಪರೀಕ್ಷಾ ಫಲಿತಾಂಶಗಳು ಜೂನ್ 30ರಂದು ಪ್ರಕಟವಾಗುವುದಾಗಿ ನಿರ್ಧಾರವಾಗಿತ್ತು. ಆದರೆ ನೀಟ್-ಯುಜಿ ಹಾಗೂ ಯುಜಿಸಿ-ನೆಟ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿವೆಯೆಂಬ ಆರೋಪಗಳಿಗೆ ಸಂಬಂಧಿಸಿದ ವಿವಾದಗಳು ಭುಗಿಲೆದ್ದ ಹಿನ್ನೆಲೆಯಲ್ಲಿ ಪರೀಕ್ಷಾ ಫಲಿತಾಂಶಗಳನ್ನು ವಿಳಂಬವಾಗಿ ಪ್ರಕಟಿಸಲಾಗಿದೆ.