×
Ad

ದೇಶದ ಚಿನ್ನದ ಆಮದು ಶೇ 17ರಷ್ಟು ಕುಸಿತ; ಇಂದು ಚಿನ್ನದ ಬೆಲೆ ಹೇಗಿದೆ?

Update: 2025-12-17 12:47 IST

ಸಾಂದರ್ಭಿಕ ಚಿತ್ರ

ಚಿನ್ನದ ಆಮದು ಪ್ರಮಾಣ ಇಳಿದಿದ್ದರೂ ಅದರ ಮೇಲಿನ ವೆಚ್ಚ ಹೆಚ್ಚಾಗಿದೆ. 2024-25ರಲ್ಲಿ ಆಮದು ಶುಲ್ಕ ಸುಮಾರು 58 ಬಿಲಿಯನ್ ಡಾಲರ್ಗೆ ತಲುಪಿದೆ. ಹಿಂದಿನ ಅವಧಿಗೆ ಹೋಲಿಸಿದರೆ ಈ ಪ್ರಮಾಣ ಶೇ 69ರಷ್ಟು ಹೆಚ್ಚಳವಾಗಿದೆ.

ಅಂತಾರಾಷ್ಟ್ರೀಯ ಚಿನ್ನದ ಬೆಲೆ, ರೂಪಾಯಿ- ಡಾಲರ್ ವಿನಿಮಯ ದರ ಮತ್ತು ಸರ್ಕಾರ ವಿಧಿಸುವ ತೆರಿಗೆಗಳು ಮುಖ್ಯವಾಗಿ ದೇಶದಲ್ಲಿ ಚಿನ್ನದ ಏರಿಳಿತಕ್ಕೆ ಕಾರಣವಾಗಿದೆ. ಇತ್ತೀಚಿಗಿನ ಜಾಗತಿಕ ರಾಜಕೀಯ ಉದ್ವಿಗ್ನತೆಗಳು, ಆರ್ಥಿಕ ಅನಿಶ್ಚಿತತೆ, ವಿವಿಧ ದೇಶಗಳ ಕೇಂದ್ರ ಬ್ಯಾಂಕ್‌ಗಳ ಚಿನ್ನ ಖರೀದಿ ಮತ್ತು ಸುರಕ್ಷಿತ ಹೂಡಿಕೆ ಎಂಬ ಮನೋಭಾವ ಎಲ್ಲವು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿವೆ.

ಮಂಗಳೂರಿನಲ್ಲಿ ಚಿನ್ನದ ದರವೆಷ್ಟು?

ಬುಧವಾರ ಡಿಸೆಂಬರ್ 17ರಂದು ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ರೂ 13,451(+65), ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ ರೂ 12,330 (+60) ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನಕ್ಕೆ ರೂ 10,088 (+49)ಬೆಲೆಗೆ ಏರಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: ರೂ 1,33,850

22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: ರೂ 1,22,690

ಬೆಳ್ಳಿ ಬೆಲೆ 1 ಕೆಜಿ: ರೂ 1,90,100

ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ?

ಒಂದು ಗ್ರಾಂ 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 10,038

ಒಂದು ಗ್ರಾಂ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 12,269

ಒಂದು ಗ್ರಾಂ 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 13,385

ಚಿನ್ನದ ಆಮದು ಕುಸಿತ

ಕಳೆದ ಹತ್ತು ವರ್ಷಗಳಲ್ಲಿ ಭಾರತದ ಚಿನ್ನದ ಆಮದು ಪ್ರಮಾಣದಲ್ಲಿ ಸ್ಪಷ್ಟವಾದ ಇಳಿಕೆ ಕಂಡಿದೆ. ಸರ್ಕಾರಿ ದತ್ತಾಂಶಗಳ ಪ್ರಕಾರ, 2014-15ರಲ್ಲಿ ಸುಮಾರು 9.15 ಲಕ್ಷ ಕಿಲೋಗ್ರಾಂ ಚಿನ್ನ ಆಮದು ಆಗಿದ್ದರೆ, 2024-25ರ ವೇಳೆಗೆ ಅದು 7.57 ಲಕ್ಷ ಕಿಲೋಗ್ರಾಂಗೆ ಇಳಿದಿದೆ. ಅಂದರೆ ಪ್ರಮಾಣದ ಮಟ್ಟದಲ್ಲಿ ಸುಮಾರು ಶೇ 17 ಕ್ಕೂ ಹೆಚ್ಚು ಕುಸಿತವಾಗಿದೆ. ಇದು ಚಿನ್ನದ ಬಳಕೆ ಮತ್ತು ಆಮದು ಕುರಿತು ದೇಶದಲ್ಲಿ ನಿಧಾನವಾದ ಬದಲಾವಣೆ ನಡೆಯುತ್ತಿದೆ ಎಂಬುದನ್ನು ಸೂಚಿಸುತ್ತದೆ.

ಚಿನ್ನದ ಆಮದು ಪ್ರಮಾಣ ಇಳಿದಿದ್ದರೂ ಅದರ ಮೇಲಿನ ವೆಚ್ಚ ಹೆಚ್ಚಾಗಿದೆ. 2024-25ರಲ್ಲಿ ಆಮದು ಶುಲ್ಕ ಸುಮಾರು 58 ಬಿಲಿಯನ್ ಡಾಲರ್ಗೆ ತಲುಪಿದೆ. ಹಿಂದಿನ ಅವಧಿಗೆ ಹೋಲಿಸಿದರೆ ಶೇ 69ರಷ್ಟು ಹೆಚ್ಚಳವಾಗಿದೆ. ಕಡಿಮೆ ಚಿನ್ನ ಆಮದು ಮಾಡಿದರೂ ಹೆಚ್ಚು ಹಣ ತೆರಬೇಕಾಗಿ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News