×
Ad

ಪಂಜಾಬ್ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ | ಆಪ್ ಮತ್ತು ಕಾಂಗ್ರೆಸ್ ನಡುವೆ ನಿಕಟ ಸ್ಪರ್ಧೆ

Update: 2025-12-17 12:43 IST

Photo source: X

ಚಂಡೀಗಢ: ರವಿವಾರ ಪಂಜಾಬ್ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಆಡಳಿತಾರೂಢ ಆಪ್ ಹಾಗೂ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದೆ. ಬುಧವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ರಾಜ್ಯದ 154 ಮತ ಎಣಿಕೆ ಕೇಂದ್ರಗಳು ಹಾಗೂ 141 ಸ್ಥಳಗಳಲ್ಲಿ ಮತ ಎಣಿಕೆ ಕಾರ್ಯ ಬಿರುಸಿನಿಂದ ಸಾಗಿದೆ.

ಡಿಸೆಂಬರ್ 14ರಂದು ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 22 ಜಿಲ್ಲಾ ಪರಿಷತ್ ಗಳ 347 ವಲಯದ ಸದಸ್ಯರು, 153 ಪಂಚಾಯತಿ ಸಮಿತಿಯ 2,838 ವಲಯಗಳ ಸದಸ್ಯರ ಆಯ್ಕೆಗಾಗಿ ಮತದಾನ ನಡೆದಿತ್ತು. ಈ ವೇಳೆ ಶೇ. 48ರಷ್ಟು ಮತದಾನ ಮಾತ್ರವಾಗಿತ್ತು.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮತಪತ್ರಗಳಲ್ಲಿ ನಡೆದಿರುವುದರಿಂದ, ಮತ ಎಣಿಕೆ ಸಾಮಾನ್ಯಕ್ಕಿಂತ ಹೆಚ್ಚು ಅವಧಿ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗ ಹೇಳಿದೆ. ಅಂತಿಮ ಫಲಿತಾಂಶಗಳು ಇಂದು ಮಧ್ಯಾಹ್ನ ಅಥವಾ ರಾತ್ರಿಯ ವೇಳೆಗೆ ನಿಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News