"ಬಿಜೆಪಿ ನಾಯಕರು, ಮುಖ್ಯ ಚುನಾವಣಾ ಆಯುಕ್ತರು ನಡೆಸಿದ ಹತ್ಯೆ" : 26 ಬಿಎಲ್‌ಒಗಳ ಸಾವಿನ ಬಗ್ಗೆ ಕಾಂಗ್ರೆಸ್ ಆರೋಪ
Update: 2025-12-01 12:59 IST
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಕಳೆದ 20 ದಿನಗಳಲ್ಲಿ 26 ಮಂದಿ BLOಗಳ ಸಾವನ್ನು ಬಿಜೆಪಿ ನಾಯಕರು ಮತ್ತು ಮುಖ್ಯ ಚುನಾವಣಾ ಆಯುಕ್ತರು ನಡೆಸಿದ ಹತ್ಯೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ನ 'ಎಕ್ಸ್' ಖಾತೆ ವಿದೇಶದಿಂದ ನಿರ್ವಹಿಸಲ್ಪಡುತ್ತಿದೆ ಎಂದು ಸುಳ್ಳುಗಳನ್ನು ಹರಡುವ ಮೂಲಕ ಬಿಜೆಪಿ ಮತಗಳ್ಳತನದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ. ಗುಜರಾತ್ ಬಿಜೆಪಿ ಖಾತೆ ಐರ್ಲೆಂಡ್‌ನಲ್ಲಿ ಮತ್ತು ಡಿಡಿ ನ್ಯೂಸ್ ಖಾತೆ ಅಮೆರಿಕದಲ್ಲಿ ಲೊಕೇಷನ್ ತೋರಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮುಖ್ಯ ಚುನಾವಣಾ ಆಯುಕ್ತರು ಆದೇಶಿಸಿದ ಆತುರದ ಎಸ್‌ಐಆರ್ ದೇಶದ ಮುಂದಿರುವ ಪ್ರಮುಖ ಸಮಸ್ಯೆಯಾಗಿದೆ. ಇದು ಕೆಲವು ಸಾಮಾಜಿಕ ಗುಂಪುಗಳ ಮತಗಳನ್ನು ಅಳಿಸಲು ಬ್ಲಾಕ್ ಅಧಿಕಾರಿಗಳಿಗೆ ಕೆಲಸದ ಒತ್ತಡ ಮತ್ತು ಕಿರುಕುಳಕ್ಕೆ ಕಾರಣವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.