×
Ad

ಆಪ್, ಬಿಜೆಪಿ ಗುರಿಯಾಗಿರಿಸಿ ದಿಲ್ಲಿ ಕಾಂಗ್ರೆಸ್‌ನಿಂದ ಶ್ವೇತಪತ್ರ ಬಿಡುಗಡೆ

Update: 2024-12-25 20:12 IST

PC : PTI 

ಹೊಸದಿಲ್ಲಿ : ಕಾಂಗ್ರೆಸ್ ಪಕ್ಷದ ದಿಲ್ಲಿ ಘಟಕ ಮಾಲಿನ್ಯ, ನಾಗರಿಕ ಸೌಲಭ್ಯಗಳು, ಕಾನೂನು ಹಾಗೂ ಸುವ್ಯವಸ್ಥೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಈಡೇರಿಸದ ಭರವಸೆಗಳು, ದುರಾಡಳಿತದ ಕುರಿತಂತೆ ಆಮ್ ಆದ್ಮಿ ಪಕ್ಷ ಹಾಗೂ ಬಿಜೆಪಿಯನ್ನು ಗುರಿಯಾಗಿರಿಸಿ ಬುಧವಾರ 12 ಅಂಶಗಳ ‘‘ಶ್ವೇತಪತ್ರ’’ ಬಿಡುಗಡೆ ಮಾಡಿದೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಐಎಸಿಸಿಯ ಕೋಶಾಧಿಕಾರಿ ಅಜಯ್ ಮಾಕನ್, ಆಪ್ ಸಂಚಾಲಕ ಅರವಿಂದ್‌ ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡರು. ಕೇಜ್ರಿವಾಲ್ ಅವರ ಪಕ್ಷ ಜನಲೋಕಪಾಲ್ ಚಳವಳಿಯ ಮೂಲಕ ಅಧಿಕಾರಕ್ಕೆ ಬಂತು. ಆದರೆ, ಅದು ಭ್ರಷ್ಟಾಚಾರ ನಿಗ್ರಹ ಒಂಬುಡ್ಸ್‌ಮನ್ ಅನ್ನು ಸ್ಥಾಪಿಸಲು ವಿಫಲವಾಗಿದೆ ಎಂದು ಹೇಳಿದ್ದಾರೆ.

ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರನ್ನು ವಿವರಿಸಲು ಒಂದು ಪದವಿದ್ದರೆ, ಅದು ‘ನಕಲಿ’ ಎಂದು ಹೇಳಬಹುದು ಎಂದು ಅವರು ಶ್ವೇತ ಪತ್ರ ಬಿಡುಗಡೆ ಸಂದರ್ಭ ಹೇಳಿದರು.

ಒಂದು ವೇಳೆ ಇಡೀ ದೇಶದಲ್ಲಿ ಯಾರಾದರೂ ವಂಚನೆಯ ರಾಜನಿದ್ದರೆ, ಅದು ಕೇಜ್ರಿವಾಲ್. ಆದುದರಿಂದಲೇ ನಾವು ಕೇಜ್ರಿವಾಲ್ ಸರಕಾರ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ಸರಕಾರದ ಕುರಿತು ಶ್ವೇತ ಪತ್ರದೊಂದಿಗೆ ಇಲ್ಲಿಗೆ ಬಂದಿದ್ದೇವೆ ಎಂದು ಮಾಕನ್ ಹೇಳಿದ್ದಾರೆ.

‘‘ಒಂದು ವೇಳೆ ಇಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರು ಅವಕಾಶ ನೀಡದೇ ಇದ್ದರೆ, ಪಂಜಾಬ್‌ ನಲ್ಲಿ ಅಸ್ತಿತ್ವಕ್ಕೆ ತನ್ನಿ. ಯಾರು ನಿಮ್ಮನ್ನು ಪ್ರಶ್ನಿಸುತ್ತಾರೆ? ಪಂಜಾಬ್‌ನಲ್ಲಿ ನಿಮ್ಮದೇ ಸರಕಾರ ಇದೆ. ಜನಲೋಕಪಾಲ್ ಹೆಸರಿನಲ್ಲಿ ಆಮ್ ಆದ್ಮಿ ಪಕ್ಷ 10 ವರ್ಷಗಳ ಹಿಂದೆ ಅಧಿಕಾರಕ್ಕೆ ಬಂತು. ಈಗ ಅದು ಮರೆತಿದೆ’’ ಎಂದು ಅವರು ಹೇಳಿದ್ದಾರೆ.

ಅವರು ಯಾವಾಗಲೂ ಹೇಳುತ್ತಿರುತ್ತಾರೆ, ದಿಲ್ಲಿಯನ್ನು ಲಂಡನ್‌ನಂತೆ ಮಾಡಲಾಗುವುದು ಎಂದು. ಆದರೆ, ಅವರು ದಿಲ್ಲಿಯನ್ನು ಮಾಲಿನ್ಯದಲ್ಲಿ ನಂಬರ್ 1 ಆಗಿ ಮಾಡಿದ್ದಾರೆ ಎಂದು ಮಾಕನ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News