2008ರ ಬಾಟ್ಲಾ ಹೌಸ್ ಎನ್‌ಕೌಂಟರ್ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಿದ ದಿಲ್ಲಿ ಹೈಕೋರ್ಟ್
Update: 2023-10-12 22:43 IST
Photo: PTI
ಹೊಸದಿಲ್ಲಿ: ದಿಲ್ಲಿ ಹೈಕೋರ್ಟ್ ಗುರುವಾರ 2008ರ ದಿಲ್ಲಿಯ ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಆರಿಝ್ ಖಾನ್‌ಗೆ ವಿಧಿಸಲಾಗಿದ್ದ ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಿದೆ.
ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರ ಜೊತೆಗೆ ದಿಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನಚಂದ ಶರ್ಮಾ ಕೂಡ ಕೊಲ್ಲಲ್ಪಟ್ಟಿದ್ದರು.
ಎನ್‌ಕೌಂಟರ್ ಬಳಿಕ ತಲೆ ಮರೆಸಿಕೊಂಡಿದ್ದ ಖಾನ್ ಅಲಿಯಾಸ್ ಜುನೈದ್‌ನನ್ನು ದಿಲ್ಲಿ ಪೊಲೀಸ್‌ನ ವಿಶೇಷ ಘಟಕವು 2018ರಲ್ಲಿ ಬಂಧಿಸಿತ್ತು. ಮೇ 2021ರಲ್ಲಿ ದಿಲ್ಲಿಯ ಸಾಕೇತ ನ್ಯಾಯಾಲಯವು ಖಾನ್ ದೋಷಿಯೆಂದು ಎತ್ತಿ ಹಿಡಿದಿತ್ತು ಮತ್ತು ಮರಣದಂಡನೆಯನ್ನು ವಿಧಿಸಿತ್ತು.
ಖಾನ್ ತನ್ನ ದೋಷ ನಿರ್ಣಯ ಮತ್ತು ಮರಣದಂಡನೆಯನ್ನು ಪ್ರಶ್ನಿಸಿ ದಿಲ್ಲಿ ಹೈಕೋರ್ಟ್ ನಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದ.