×
Ad

ದಿಲ್ಲಿ ರೈಲು ನಿಲ್ಲಾಣದಲ್ಲಿ ಕಾಲ್ತುಳಿತ ಪ್ರಕರಣ: ಕೆಲವೇ ತಿಂಗಳ ಹಿಂದೆ ದತ್ತು ಪಡೆದುಕೊಂಡ ಪುತ್ರನನ್ನು ಕಳೆದುಕೊಂಡ ದಂಪತಿ!

Update: 2025-02-17 21:01 IST

PC : PTI 

ಹೊಸದಿಲ್ಲಿ : ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ತಮ್ಮ 12 ವರ್ಷದ ಪುತ್ರನನ್ನು ಕಳೆದುಕೊಳ್ಳುವ ಮೂಲಕ ಬಿಹಾರದ ದಂಪತಿ ಸರ್ವಸ್ವವನ್ನೂ ಕಳೆದುಕೊಂಡಿದ್ದಾರೆ.

ಬಿಹಾರದ ಇಂದ್ರಜಿತ್ ಪಾಸ್ವಾನ್ ಅವರ 12 ವರ್ಷದ ಪುತ್ರ ನೀರಜ್ ರೈಲು ನಿಲ್ದಾಣದಲ್ಲಿ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ರೈಲು ಹತ್ತುವ ಸಂದರ್ಭ ಪೋಷಕರ ಜೊತೆಗಿದ್ದ. ಆದರೆ, ಈ ಸಂದರ್ಭ ಸಂಭವಿಸಿದ ಕಾಲ್ತುಳಿತದಲ್ಲಿ ಆತ ಮೃತಪಟ್ಟಿದ್ದಾನೆ.

ಇಂದ್ರಜಿತ್ ಪಾಸ್ವಾನ್ ಹಾಗೂ ಅವರ ಪತ್ನಿ ಕೆಲವು ತಿಂಗಳ ಹಿಂದೆ ತನ್ನ ಸಹೋದರನಿಂದ ಆತನ ಪುತ್ರ ನೀರಜ್‌ನನ್ನು ದತ್ತು ಪಡೆದುಕೊಂಡಿದ್ದರು. ಹಲವು ವರ್ಷಗಳ ಕಾಲ ಮಕ್ಕಳಾಗದೇ ಇದ್ದಾಗ ಇಂದ್ರಜಿತ್ ಹಾಗೂ ಅವರ ಪತ್ನಿ ಈ ನಿರ್ಧಾರ ತೆಗೆದುಕೊಂಡಿದ್ದರು.

ನೀರಜ್ ಕಲಿಕೆಯಲ್ಲಿ ಬುದ್ಧಿವಂತನಾಗಿದ್ದುದರಿಂದ ದತ್ತು ತೆಗೆದುಕೊಂಡ ಬಳಿಕ ದಂಪತಿ ಆತನಿಗೆ ಉತ್ತಮ ಶಿಕ್ಷಣ ಕೊಡಿಸಲು ದಿಲ್ಲಿಗೆ ಕರೆದುಕೊಂಡು ಬಂದಿದ್ದರು. ದಂಪತಿ ಪುತ್ರನೊಂದಿಗೆ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಲ್ಲಿ ಸಿಲುಕಿಕೊಂಡಿದ್ದಾರೆ.

‘‘ಕಾಲ್ತುಳಿತದಲ್ಲಿ ನೀರಜ್‌ನ ಇಬ್ಬರೂ ಪೋಷಕರು ಗಂಭೀರ ಗಾಯಗೊಂಡಿದ್ದಾರೆ’’ ಎಂದು ಬಾಲಕನ ಸಂಬಂಧಿಕರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News