×
Ad

Delhi ಗಲಭೆ ಪ್ರಕರಣ | ಖಾಲಿದ್ ಸೈಫಿಗೆ ಮಧ್ಯಂತರ ಜಾಮೀನು

Update: 2026-01-30 22:10 IST

 ಖಾಲಿದ್ ಸೈಫಿ | Photo Credit : Khalid Saifi/Facebook

ಹೊಸದಿಲ್ಲಿ, ಜ. 30: 2020ರ ಈಶಾನ್ಯ ದಿಲ್ಲಿ ಗಲಭೆ ಪ್ರಕರಣದ ಆರೋಪಿಯಾಗಿರುವ ಖಾಲಿದ್ ಸೈಫಿಗೆ ದಿಲ್ಲಿ ನ್ಯಾಯಾಲಯ 13 ದಿನಗಳ ಮಧ್ಯಂತರ ಜಾಮೀನು ನೀಡಿದೆ.

ಸಾಮಾಜಿಕ ಮಾಧ್ಯಮಗಳಿಂದ ದೂರವಿರುವುದು ಸೇರಿದಂತೆ ಹಲವು ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಸೋದರಳಿಯನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಹಾಗೂ ಕುಟುಂಬದೊಂದಿಗೆ ರಮಝಾನ್ ಆಚರಿಸಲು ‘ಯುನೈಟೆಡ್ ಎಗೈನ್ಸ್ಟ್ ಹೇಟ್’ನ ಸ್ಥಾಪಕ ಸೈಫಿ ಅವರು ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜಪೇಯಿ ನಡೆಸಿದರು.

ನ್ಯಾಯಾಲಯವು ಅವರಿಗೆ 2026ರ ಫೆಬ್ರವರಿ 6ರಿಂದ ಫೆಬ್ರವರಿ 13ರವರೆಗೆ ಮಧ್ಯಂತರ ಜಾಮೀನು ನೀಡಿದೆ. ಜೊತೆಗೆ 20,000 ರೂ. ವೈಯಕ್ತಿಕ ಬಾಂಡ್ ಹಾಗೂ ಅದೇ ಮೊತ್ತದ ಎರಡು ಶ್ಯೂರಿಟಿಗಳನ್ನು ಸಲ್ಲಿಸಲು ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News