ಸಿಸಿಟಿವಿ ವೀಡಿಯೊ ಬಹಿರಂಗದಿಂದ ಮತದಾರನ ಖಾಸಗಿತನ, ಭದ್ರತೆಯ ಉಲ್ಲಂಘನೆ: ಚುನಾವಣಾ ಆಯೋಗ ಸಮಜಾಯಿಷಿ
ಚುನಾವಣಾ ಆಯೋಗ | PC : PTI
ಹೊಸದಿಲ್ಲಿ: ಮತಗಟ್ಟೆಗಳಲ್ಲಿ ಮತದಾನದ ಸಿಸಿಟಿವಿ ವೀಡಿಯೋ ಮತ್ತಿತರ ದೃಶ್ಯಾವಳಿಗಳನ್ನು ಬಿಡುಗಡೆಗೊಳಿಸುವುದರಿಂದ ಮತದಾರನ ಖಾಸಗಿತನ ಹಾಗೂ ಭದ್ರತೆಯನ್ನು ಕಡೆಗಣಿಸಿದಂತಾಗುತ್ತದೆ ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆ ಹಾಗೂ ಸುಪ್ರೀಂಕೋರ್ಟ್‌ನ ಮಾರ್ಗದರ್ಶಿ ಸೂತ್ರಗಳಿಗೆ ವ್ಯತಿರಿಕ್ತವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗವು ಶನಿವಾರ ತಿಳಿಸಿದೆ.
ಮತಗಟ್ಟೆಗಳ ವೀಡಿಯೊ ಫೋಟೇಜ್‌ಗಳನ್ನು ಹಂಚಿಕೊಳ್ಳುವುದರಿಂದ ಯಾವುದೇ ಗುಂಪು ಅಥವಾ ವ್ಯಕ್ತಿಗೆ ಮತದಾರರನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ಮತದಾನ ಮಾಡಿದ ಮತದಾರನನಾಗಲಿ ಅಥವಾ ಮತದಾನ ಮಾಡಿರದ ವ್ಯಕ್ತಿಯಾಗಲಿ, ಸಮಾಜ ವಿರೋಧಿ ಶಕ್ತಿಗಳ ಬೆದರಿಕೆ, ತಾರತಮ್ಯ ಹಾಗೂ ಒತ್ತಡಕ್ಕೆ ಸಿಲುಕುವ ಸಾಧ್ಯತೆಯಿದೆಯೆಂದು ಚುನಾವಣಾ ಆಯೋಗ ತಿಳಿಸಿದೆ.
ಒಂದು ವೇಳೆ ನಿರ್ದಿಷ್ಟ ರಾಜಕೀಯ ಪಕ್ಷವು, ನಿರ್ದಿಷ್ಟ ಮತಗಟ್ಟೆಯಲ್ಲಿ ಕಡಿಮೆ ಮತವನ್ನು ಪಡೆದಿದ್ದರೆ,ಯಾವ ವ್ಯಕ್ತಿಯು ಮತದಾನ ಮಾಡಿದ್ದಾನೆ/ಳೆ ಅಥವಾ ಮಾಡಿಲ್ಲ ಎಂಬುದನ್ನು ಸಿಸಿಟಿವಿ ಫೂಟೇಜ್ ಮೂಲಕ ಗುರುತಿಸಬಹುದಾಗಿದೆ. ಆನಂತರ ಮತದಾರರು ಕಿರುಕುಳ ಹಾಗೂ ಬೆದರಿಕೆಗೆ ಒಳಗಾಗುವ ಅಪಾಯವಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಕಳೆದ ವರ್ಷದ ಲೋಕಸಭಾ ಚುನಾವಣೆ ಹಾಗೂ ಮಹಾರಾಷ್ಟ್ರ ಸೇರಿದಂತೆ ಇತ್ತೀಚೆಗೆ ನಡೆದ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಸಮಗ್ರ,ಡಿಜಿಟಲ್ ಹಾಗೂ ಮೆಶಿನ್ ರೀಡೇಬಲ್ ಮತದಾರರ ಪಟ್ಟಿಯನ್ನು ಒದಗಿಸುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದರು. ಕೇವಲ ‘ಸತ್ಯವನ್ನು ಹೇಳುವುದರಿಂದ’ ಚುನಾವಣಾ ಆಯೋಗದ ವಿಶ್ವಸನೀಯತೆಯನ್ನು ರಕ್ಷಿಸಬಹುದಾಗಿದೆ ಎಂದು ರಾಹುಲ್ ಹೇಳಿದ್ದರು.