×
Ad

ಆತಿಶಿಗೆ ಚುನಾವಣಾ ಆಯೋಗ ನೋಟಿಸ್

Update: 2024-04-05 21:24 IST

Photo : PTI

ಹೊಸದಿಲ್ಲಿ: ಪಕ್ಷ ಸೇರಲು ಬಿಜೆಪಿ ತನ್ನನ್ನು ಸಂಪರ್ಕಿಸಿದೆ ಎಂಬ ಹೇಳಿಕೆ ಕುರಿತಂತೆ ಚುನಾವಣಾ ಆಯೋಗ ದಿಲ್ಲಿ ಸಚಿವೆ ಹಾಗೂ ಆಪ್ ನಾಯಕಿ ಆತಿಶಿ ಅವರಿಗೆ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.

ಬಿಜೆಪಿ ತನ್ನನ್ನು ತನ್ನ ನಿಕಟವರ್ತಿಗಳ ಮೂಲಕ ಸಂಪರ್ಕಿಸಿದೆ ಹಾಗೂ ಪಕ್ಷ ಸೇರುವಂತೆ ಕೇಳಿಕೊಂಡಿದೆ ಎಂಬ ಆತಿಶಿ ಅವರ ಹೇಳಿಕೆಯನ್ನು ಪ್ರಶ್ನಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

ಚುನಾವಣಾ ಆಯೋಗ ಜಾರಿ ಮಾಡಿದ ನೋಟಿಸಿನಲ್ಲಿ, ‘‘ನೀವು ದಿಲ್ಲಿ ಸರಕಾರದಲ್ಲಿ ಸಚಿವರಾಗಿದ್ದೀರಿ ಹಾಗೂ ರಾಷ್ಟ್ರೀಯ ಪಕ್ಷದ ನಾಯಕರಾಗಿದ್ದೀರಿ. ತಮ್ಮ ನಾಯಕರು ಸಾರ್ವಜನಿಕ ವೇದಿಕೆಯಲ್ಲಿ ಏನು ಹೇಳಿದರೂ ಅದನ್ನು ಮತದಾರರು ನಂಬುತ್ತಾರೆ. ಈ ಹಿನ್ನೆಲೆಯಲ್ಲಿ ನೀವು ನೀಡಿದ ಹೇಳಿಕೆ ಚುನಾವಣಾ ಪ್ರಚಾರದ ಮೇಲೆ ಪ್ರಭಾವ ಬೀರುತ್ತದೆ’’ ಎಂದಿದೆ.

ಸೋಮವಾರ ಅಪರಾಹ್ನದ ಒಳಗೆ ಪ್ರತಿಕ್ರಿಯಿ ನೀಡುವಂತೆ ಆತಿಶಿ ಅವರಿಗೆ ಚುನಾವಣಾ ಆಯೋಗ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News